ಉತ್ತರಾಖಂಡ್: ಮದ್ಯದ ಅಮಲಿನಲ್ಲಿ ಶಾಲೆಗೆ ಆಗಮಿಸುತ್ತಿದ್ದ ಶಿಕ್ಷಕ, ತರಗತಿಯ ವಿದ್ಯಾರ್ಥಿಗಳಿಗೆ ನಿಂದಿಸಿದ ಬಗ್ಗೆ ಮಾಹಿತಿ ಪಡೆದ ಶಾಲಾ ಆಡಳಿತ ಮಂಡಳಿ, ಇದೀಗ ಆತನನ್ನು ಕೆಲಸದಿಂದ ಅಮಾನತುಗೊಳಿಸಿದೆ.
ಇದನ್ನೂ ಓದಿ: ಕಲ್ಯಾಣ ಪ್ರಗತಿಗೆ 3000 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲು ಕೆಕೆಕೆಆರ್ ಡಿಬಿ ಸಭೆಯಲ್ಲಿ ಒಪ್ಪಿಗೆ : ಅದ್ಯಕ್ಷ ಅಜಯಸಿಂಗ್ ಹೇಳಿಕೆ
ಉತ್ತರಾಖಂಡ್ನ ಪೌರಿಯ ರಿಖ್ನಿಖಾಲ್‌ನ ಪ್ರಾಥಮಿಕ ಶಾಲೆಯೊಂದರಲ್ಲಿ ಈ ಘಟನೆ ವರದಿಯಾಗಿದ್ದು, ಶಿಕ್ಷಕ ಮದ್ಯ ಸೇವಿಸಿದ ಅಮಲಿನಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ನಿಂದಿಸಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಸಂದರ್ಭಗಳು ಎದುರಾಗಿತ್ತು ಎಂದು ಹೇಳಲಾಗಿದೆ. ಶಿಕ್ಷಕನನ್ನು ದೇವೇಂದ್ರ ಲಾಲ್ ಎಂದು ಗುರುತಿಸಲಾಗಿದ್ದು, ಸದ್ಯ ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಸೆಪ್ಟಂಬರ್ 3ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಬೀಳುವ ಸಾಧ್ಯತೆ, ಗಾಳಿ ಸಹಿತ ಪ್ರವಾಹ ಭೀತಿ
ಕುಡಿದ ಅಮಲಿನಲ್ಲಿ ಶಾಲೆಗೆ ಆಗಮಿಸುವ ಶಿಕ್ಷಕ, ವಿದ್ಯಾರ್ಥಿಗಳನ್ನು ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಗಳೊಬ್ಬರು, "ಈ ವರ್ಷದ ಜನವರಿ ಮತ್ತು ಮೇ ತಿಂಗಳಲ್ಲಿ ಶಿಕ್ಷಕರ ವರ್ತನೆಗೆ ಸಂಬಂಧಿಸಿದಂತೆ ಹಲವಾರು ಲಿಖಿತ ಎಚ್ಚರಿಕೆಗಳನ್ನು ನೀಡಲಾಗಿತ್ತು. ಶಿಕ್ಷಕನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳು ಒದಗಿದ ನಂತರವೇ, ಆತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು,(ಏಜೆನ್ಸೀಸ್).