ನ್ಯೂಸ್

ಶಾಲಾ ನೇಮಕಾತಿ ಹಗರಣ; ಇಡಿ ದಾಳಿ ವೇಳೆ ಪರಾರಿಯಾಗಲು ಯತ್ನಿಸಿದ ಟಿಎಂಸಿ ಶಾಸಕ ಬಂಧನ| ed raid

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಾಲಾ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಜಿಬನ್ ಕೃಷ್ಣ ಸಹಾ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿ, ಅವರನ್ನು ಬಂಧಿಸಿದೆ.

ಮುರ್ಷಿದಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಶಾಸಕ ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಗೋಡೆಯಿಂದ ಹಾರಿದ್ದಾರೆ. ಇದನ್ನು ಗಮನಿಸಿದ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ತಕ್ಷಣ ಅವನನ್ನು ಸೆರೆ ಹಿಡಿದಿದ್ದಾರೆ. ಬಳಿಕ ಐದು ಇಡಿ ಅಧಿಕಾರಿಗಳು ಶಾಸಕರ ಜೊತೆ ನಿರಂತರ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. ಇನ್ನೂ ಸಾಕ್ಷ್ಯದಲ್ಲಿನ ವ್ಯತ್ಯಾಸಗಳಿಂದಾಗಿ ಇಡಿ ಅಧಿಕಾರಿಗಳು ಅಂತಿಮವಾಗಿ ಅವರನ್ನು ಬಂಧಿಸಿದ್ದಾರೆ.

(ಏಜೆನ್ಸೀಸ್)

ಇಡಿ ತಂಡವು ಸಹಾ ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದೆ. ಈ ಹಗರಣದಲ್ಲಿ ದೊಡ್ಡ ಪ್ರಮಾಣದ ಹಣ ವರ್ಗಾವಣೆ ನಡೆದಿದೆ ಎಂದು ಸಂಸ್ಥೆ ಹೇಳಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ.

ಎಸ್‌ಎಸ್‌ಸಿ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರಾಜ್ಯಾದ್ಯಂತ ಹೊಸ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬೆಳಗ್ಗೆಯಿಂದಲೇ ಕೋಲ್ಕತ್ತಾ ಸೇರಿದಂತೆ ಹಲವು ಜಿಲ್ಲೆಗಳು ಪರಿಶೀಲನೆಗೆ ಒಳಪಟ್ಟಿವೆ. ಈ ಶೋಧ ಕಾರ್ಯದ ಭಾಗವಾಗಿ ಮುರ್ಷಿದಾಬಾದ್ ಮತ್ತು ಬಿರ್ಭುಮ್ ಜಿಲ್ಲೆಗಳಿಗೂ ತಂಡಗಳನ್ನು ರವಾನಿಸಲಾಗಿದೆ. ಇನ್ನೂ ಶಾಸಕ ಕೃಷ್ಣ ಸಹಾ ಅವರ ಆಪ್ತ ಸಹಚರರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.