ನ್ಯೂಸ್

ಶಾಲೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

djtrupti

ಬೆಂಗಳೂರು

ಮಕ್ಕಳನ್ನು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಲು ಶಾಲೆಗಳನ್ನು ಆರಂಭಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿ.15ರೊಳಗೆ ಶಾಲೆಗಳನ್ನು ತೆರೆಯಬೇಕೆಂದು ಶಿಕ್ಷಣ ತಜ್ಞರು ಮತ್ತು ವಿವಿಧ ಸಂಟನೆಗಳು ಶನಿವಾರ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಕರೊನಾ ಸೋಂಕನ್ನು ನಿಯಂತ್ರಿಸುವ ನೆಪದಲ್ಲಿ ಶಾಲೆ&ಕಾಲೇಜುಗಳನ್ನು ಮಾರ್ಚ್​ ತಿಂಗಳಿನಿಂದಲೇ ಮುಚ್ಚಲಾಗಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಡಿ.15ರೊಳಗೆ ಶಾಲಾರಂಭ ಮಾಡಬೇಕು. ಆನ್​ಲೈನ್​ ಶಿಕ್ಷಣ ಹೆಚ್ಚಿನ ಮಕ್ಕಳಿಗೆ ತಲುಪುತ್ತಿಲ್ಲ. ಕಲಿಕೆಯ ನಿರಂತರತೆಗಾಗಿ ಶಾಲೆಗಳನ್ನು ಆರಂಭಿಸಬೇಕು. ಇಲ್ಲವಾದರೆ, ಮಕ್ಕಳ ಸಾಗಾಣಿಕೆ, ಬಾಲ ಕಾರ್ಮಿಕ ಪದ್ಧತಿ, ಜೀತದ ದುಡಿತ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಪಾಲಕರೊಡನೆ ಸಂರ್ಷ ಇತ್ಯಾದಿ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣವು ಶೇ.0.07 ಇದೆ. ಇದರಲ್ಲಿ ಶೇ. 99.3 ಮೃತರು 20ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷಕ್ಕಿಂತ ಕೆಳಗಿನರವರು ಶೇ.0.2 ಹಾಗೂ 10ರಿಂದ 20 ವರ್ಷದವರು ಶೇ.0.5, ಇದರಲ್ಲಿ ಕರೊನಾ ಬರುವ ಮೊದಲೇ ಅತಿ ಗಂಭೀರ ಸಮಸ್ಯೆ ಎದುರಿಸುತ್ತಿರುವವರೇ ಹೆಚ್ಚಿದ್ದರು. ಹೀಗಾಗಿ ಮಕ್ಕಳಿಗೆ ಕರೊನಾದಿಂದ ಸಮಸ್ಯೆ ಆಗುತ್ತಿಲ್ಲ ಎಂದು ತಿಳಿದುಬರುತ್ತದೆ. ಹೀಗಾಗಿ ಶಾಲೆ ಆರಂಭಿಸಬಹುದೆಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಾಗಿದ್ದ ವೇಳೆಯಲ್ಲೇ ಎಸ್ಸೆಸ್ಸೆಲ್ಸಿ, ಸಿಇಟಿ, ಟಿಇಟಿ, ನೀಟ್​ ಎಲ್ಲ ಪರೀೆಗಳು ನಡೆದಿವೆ. ಹೀಗಾಗಿ ಸರ್ಕಾರ ಡಿ.15ರೊಳಗೆ ಶಾಲೆಯನ್ನು ಆರಂಭಿಸಬೇಕು ಎಂದು ಶಿಣ ತಜ್ಞರಾದ ಡಾ. ನಿರಂಜನಾರಾಧ್ಯ, ಶ್ರೀಪಾದ ಭಟ್​, ವಕೀಲ ನರಸಿಂಹ ಮೂರ್ತಿ ಮೊದಲಾದವರು ಆಗ್ರಹಿಸಿದ್ದಾರೆ.

ಎಐಎಸ್​ಎ್​ ನಾಯಕಿ ಕೆ.ಜ್ಯೋತಿ, ಕೆವಿಎಸ್​ನ ಸರೋವರ್​ ಬೆಂಕಿಕೆರೆ, ಶಿಕ್ಷಣ ತಂತ್ರಜ್ಞಾನ ಕೇಂದ್ರದ ಗುರುಮೂರ್ತಿ ಕಾಶಿನಾಥ್​, ಸಾಮಾಜಿಕ ಹೋರಾಟಗಾರ ಜಿ.ರವಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.