ಇತ್ತೀಚಿನ ಡಿಜಿಟಲ್ ಯುಗದಲ್ಲಿ ವಂಚನೆ ಎಂಬ ವಿಷಯ ಸಾಮಾನ್ಯವಾಗಿದೆ. ಯಾರು ಹೇಗೆ ವಂಚನೆ ಮಾಡುತ್ತಾರೆ ಎಂದು ಹೇಳುವುದು ಅಸಾಧ್ಯ. ಆನ್ಲೈನ್ ಬ್ಯಾಂಕಿಂಗ್ ಹಗರಣದಿಂದ ಹಿಡಿದು ನಾರ್ಮಲ್ ಮೆಸೇಜ್ ಕಳುಹಿಸುವ ಮೂಲಕ ಜನರನ್ನು ಹೇಗೆ ಮೋಸ ಮಾಡುತ್ತಾರೆ ಎಂಬ ಸುದ್ದಿ ಆಗಾಗ್ಗೆ ಕೇಳುತ್ತಿರುತ್ತೇವೆ. ಕೆಲವೊಮ್ಮೆ ಕಡಿಮೆ ಮೊತ್ತದ ದುಡ್ಡಿಗೆ ಮೋಸ ಮಾಡಿದರೆ, ಇನ್ನೂ ಕೆಲವೊಮ್ಮೆ ನಿರೀಕ್ಷೆಗಿಂತ ಹೆಚ್ಚಿನದಾಗಿ ಹಾನಿಯುಂಟು ಮಾಡುವಷ್ಟರ ಮಟ್ಟಿಗೆ ನೈಜ್ಯವಾಗಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ.
ಇದನ್ನು ಓದಿ: ಕದ್ದ ಎಂಬ ಕಾರಣಕ್ಕೆ ಖಾಸಗಿ ಭಾಗಕ್ಕೆ ಚಿಲ್ಲಿ ಪೌಡರ್ ಹಾಕಿದ್ರ! ವಿಡಿಯೋ ನೋಡಿದ್ರೆ ನಡುಕ ಹುಟ್ಟಿಸೋದು ಗ್ಯಾರಂಟಿ
ಸೆಲಿಬ್ರಿಟಿ, ಫೇಮಸ್ ಬ್ಯುಸಿನೆಸ್ ಪರ್ಸನ್, ಹೈಪ್ರೊಫೈಲ್ ವ್ಯಕ್ತಿಗಳ ಹೆಸರನ್ನು ಹೇಳಿ ವಂಚಿಸುವವರು ಕೆಲವರಿದ್ದರೆ. ಮತ್ತೆ ಕೆಲವರು ಲೋನ್ ನೀಡುವುದಾಗಿ, ಜಾಕ್ಪಾಟ್ ಹೊಡೆದಿರುವುದಾಗಿ ಹೇಳಿ ಪಂಗನಾಮ ಹಾಕುತ್ತಿರುತ್ತಾರೆ. ಅಂದ್ಹಾಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದ ಪೋಸ್ಟ್ ವೈರಲ್ ಆಗುತ್ತಿದೆ. ಅದರಲ್ಲಿ ಭಾರತೀಯ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು 500 ರೂಪಾಯಿ ಕೇಳುತ್ತಿರುವುದನ್ನು ಕಾಣಬಹುದಾಗಿದೆ.
ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಅದರಲ್ಲಿ ಮೋಸಗಾರನೊಬ್ಬ ಸಿಜೆಐ ಡಿವೈ ಚಂದ್ರಚೂಡ್ ಅವರಂತೆ ನಟಿಸುತ್ತಾ ಮೆಸೇಜ್ ಒಂದನ್ನು ಕಳುಹಿಸಿದ್ದಾನೆ. ಆ ಮೆಸೇಜ್ನಲ್ಲಿ, ಹಲೋ ನಾನು ಸಿಜೆಐ, ನನಗೆ ಕೊಲಿಜಿಯಂ ಮೀಟಿಂಗ್ ಇದೆ. ಆದರೆ ನಾನು ದೆಹಲಿಯ ಕನ್ನಾಟ್ ಸ್ಥಳದಲ್ಲಿ ಸಿಲುಕಿಕೊಂಡಿದ್ದೇನೆ. ಕ್ಯಾಬ್ಗಾಗಿ 500 ರೂಪಾಯಿ ಕಳುಹಿಸಿ. ನ್ಯಾಯಾಲಯಕ್ಕೆ ತಲುಪಿದ ತಕ್ಷಣ ನಿಮ್ಮ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ 500 ರೂಪಾಯಿಯನ್ನು ಐಪ್ಯಾಡ್ ಮೂಲಕ ಕಳುಹಿಸುವಂತೆ ತಿಳಿಸಿದ್ದಾರೆ.
ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ಪೋಸ್ಟ್ ಅನ್ನು ಭಾನುವಾರ (ಆಗಸ್ಟ್ 25) ಹಂಚಿಕೊಳ್ಳಲಾಗಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ವೀಕ್ಷಿಸಿದ್ದು, 2,500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಹಲವರು ಪ್ರತಿಕ್ರಿಸಿದ್ದಾರೆ. ಆತನ ಓವರ ಕಾನ್ಫಿಡೆನ್ಸ್ಗೆ 1000 ರೂಪಾಯಿ ಕಳುಹಿಸಿ, ಈ ಪ್ರಕರಣದ ವಿಚಾರಣೆ ಮೂರು ವಾರಗಳ ನಂತರ ನಡೆಸಲಾಗುವುದು ಹಾಗೂ ತೀರ್ಪು ನೀಡಲು ತ್ರಿಸದಸ್ಯ ಪೀಠವನ್ನು ರಚಿಸಿ ಎಂದು ಕಾಮೆಂಟ್ ಮಾಡಿದ್ದಾರೆ.