ನವದೆಹಲಿ: 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ಕಾನೂನುಬದ್ಧವಾಗಿ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್(Supreme Court) ಶುಕ್ರವಾರ(ಏಪ್ರಿಲ್ 4) ವಜಾಗೊಳಿಸಿದೆ. ಇದು ನೀತಿಯ ವಿಷಯವಾಗಿದ್ದು ಇದರ ಬಗ್ಗೆ ಕಾನೂನು ಮಾಡಲು ಸಂಸತ್ತನ್ನು ಕೇಳಬಹುದು ಎಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿ: ದೀದಿ ಜೈಲಿಗೆ ಹೋಗಬೇಕು’; ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕ ಹೀಗೇಳಿದ್ದೇಕೆ? | Mamata Banerjee
ಇದು ನೀತಿಯ ವಿಷಯ. ನೀವು ಸಂಸತ್ತನ್ನು ಕಾನೂನು ಮಾಡಲು ಕೇಳಬಹುದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಕ್ರೈಸ್ಟ್ ಅವರಿದ್ದ ಪೀಠವು ಹೇಳಿದೆ. ಅರ್ಜಿಯನ್ನು ವಜಾಗೊಳಿಸುವಾಗ, ನ್ಯಾಯಾಲಯವು ಅರ್ಜಿದಾರರಿಗೆ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಪ್ರಸ್ತುತಿ ಸಲ್ಲಿಸಲು ಸ್ವಾತಂತ್ರ್ಯವನ್ನು ನೀಡಿತು. ಅರ್ಜಿಯಲ್ಲಿ ಯಾವುದೇ ಸಲ್ಲಿಕೆಗಳನ್ನು ಮಾಡಿದ್ದರೆ, ಎಂಟು ವಾರಗಳಲ್ಲಿ ಕಾನೂನಿನ ಪ್ರಕಾರ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮಕ್ಕಳ ಪ್ರವೇಶವನ್ನು ನಿಯಂತ್ರಿಸಲು ಬಯೋಮೆಟ್ರಿಕ್ ದೃಢೀಕರಣದಂತಹ ಬಲವಾದ ವಯಸ್ಸಿನ ಪರಿಶೀಲನಾ ವ್ಯವಸ್ಥೆಗಳನ್ನು ಜಾರಿಗೆ ತರಲು ಕೇಂದ್ರ ಮತ್ತು ಇತರರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜೆಪ್ ಫೌಂಡೇಶನ್ ಈ ಅರ್ಜಿಯನ್ನು ಸಲ್ಲಿಸಿತ್ತು. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.(ಏಜೆನ್ಸೀಸ್)