ನವದೆಹಲಿ: ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ವಾರ್ಷಿಕ ಸಭೆಗಳ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಮೂಲದ ಗ್ಲೋಬಲ್ ಫೈನಾನ್ಸ್ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ವಿಶ್ವದ ಅತ್ಯುತ್ತಮ ಗ್ರಾಹಕ ಬ್ಯಾಂಕ್ 2025 ಮತ್ತು ಭಾರತದ ಅತ್ಯುತ್ತಮ ಬ್ಯಾಂಕ್ 2025 ಎಂಬ ಎರಡು ಪುರಸ್ಕಾರಗಳನ್ನು ಪಡೆದಿರುವುದಾಗಿ ಎಸ್ಬಿಐ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ಎಸ್ಬಿಐಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ.