ಬೆಂಗಳೂರು: ಬ್ಯಾಂಕ್‌ನಲ್ಲಿ ಕೆಲಸ ಬಯಸುವವರಿಗೆ ಗುಡ್ ನ್ಯೂಸ್. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ರಾಜ್ಯಗಳು/ಯುಟಿಗಳಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಇಂದು ಅಂದರೆ ಸೆಪ್ಟೆಂಬರ್ 1 ರಂದು ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ, ಎಲ್ಲಾ ರಾಜ್ಯಗಳು/ಯುಟಿಗಳಲ್ಲಿ ಒಟ್ಟು 6160 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಒಟ್ಟು ಹುದ್ದೆಗಳು:6160
ಹುದ್ದೆಯ ಹೆಸರು: ಭಾರತಾದ್ಯಂತ
ವೇತನ: ಮಾಸಿಕ 15,000ರೂ.
ವಯಸ್ಸಿನ ಮಿತಿ
ಅಭ್ಯರ್ಥಿಯು 01-08-2023 ರಂತೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಹೊಂದಿರಬೇಕು.
ಶೈಕ್ಷಣಿಕ ವಿವರ
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಅರ್ಜಿ ಪ್ರಕ್ರಿಯೆ ಆರಂಭ
ಅರ್ಜಿ ಸಲ್ಲಿಸಲು ಸಿದ್ಧವಿರುವ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್, sbi.co.in ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಇಂದು ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್ 21, 2023 ರವರೆಗೆ ಸಲ್ಲಿಸಬಹುದು.
SBI ಅಪ್ರೆಂಟಿಸ್ ನೇಮಕಾತಿ 2023 ಅಧಿಸೂಚನೆ PDF ಡೌನ್ಲೋಡ್ ಲಿಂಕ್
SBI ಅಪ್ರೆಂಟಿಸ್ ನೇಮಕಾತಿ 2023 ಅಪ್ಲಿಕೇಶನ್ ಲಿಂಕ್
ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ಗರಿಷ್ಠ ಹುದ್ದೆಗಳು
ರಾಜಸ್ಥಾನದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಂದರೆ 925 ಹುದ್ದೆಗಳು ಖಾಲಿಯಿದ್ದರೆ, ಇದರ ನಂತರ ತಮಿಳುನಾಡು ಎರಡನೇ ಅತಿ ಹೆಚ್ಚು 648 ಹುದ್ದೆಗಳನ್ನು ಹೊಂದಿದೆ. ಅಲ್ಲದೆ, ಕರ್ನಾಟಕಕ್ಕೆ 175 ಹುದ್ದೆಗಳು, ಉತ್ತರ ಪ್ರದೇಶಕ್ಕೆ 412 ಮತ್ತು ಬಿಹಾರಕ್ಕೆ 50 ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಮೇಲೆ ನೀಡಲಾದ ಲಿಂಕ್‌ನಿಂದ SBI ಅಪ್ರೆಂಟಿಸ್ ನೇಮಕಾತಿ 2023 ಅಧಿಸೂಚನೆಯಲ್ಲಿ ಇತರ ರಾಜ್ಯಗಳಿಗೆ ಘೋಷಿಸಲಾದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಶೀಲಿಸಿ.
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-09-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-09-2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 21-09-2023