ರಾಯ್‌ಪುರ: ( I Love You ) ಲೈಂಗಿಕ ಅಪರಾಧ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು SC/ST (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿಯಾಗಿದ್ದ ಯುವಕನನ್ನು ಛತ್ತೀಸ್‌ಗಢ ಹೈಕೋರ್ಟ್ ಖುಲಾಸೆಗೊಳಿಸಿದೆ, ಸ್ಪಷ್ಟ ಲೈಂಗಿಕ ಉದ್ದೇಶವನ್ನು ಸ್ಥಾಪಿಸದ ಹೊರತು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದು ಲೈಂಗಿಕ ಕಿರುಕುಳಕ್ಕೆ ಸಮನಾಗುವುದಿಲ್ಲ ಎಂದು ಹೇಳಿದೆ.
ಛತ್ತೀಸ್‌ಗಢ ಧಮತರಿ ಜಿಲ್ಲೆಯ ಕುರುಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮನೆಗೆ ಹೋಗ್ತಿದ್ದಾಗ ಯುವಕನೋರ್ವ ಐ ಲವ್ ಯೂ ಎಂದಿದ್ದಾನೆ. ಆತ ಈ ಹಿಂದೆಯೂ ಅನೇಕ ಬಾರಿ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಡಿ (ಹಿಂಬಾಲಿಸುವುದು), 509 (ಮಹಿಳೆಯ ನಮ್ರತೆಗೆ ಧಕ್ಕೆ ತರುವುದು), ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(2)(ವಿಎ) ಅಡಿಯಲ್ಲಿ ಕೇಸ್ ದಾಖಲಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?:
ಸಾಕ್ಷ್ಯಾಧಾರಗಳ ಕೊರತೆಯಿಂದ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಪ್ರಕರಣದಿಂದ ಖುಲಾಸೆ ಮಾಡಿತ್ತು. ನ್ಯಾಯಮೂರ್ತಿ ಸಂಜಯ್ ಎಸ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ, ಆರೋಪಿಯ ಉದ್ದೇಶ ಅಥವಾ ಬಲಿಪಶುವಿನ ವಯಸ್ಸನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಕಷ್ಟು ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ ಎಂದು ಗಮನಿಸಿದೆ.
ಯುವಕನನ್ನು ಅಪರಾಧಿ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಖುಲಾಸೆಯನ್ನು ಎತ್ತಿಹಿಡಿದು ರಾಜ್ಯದ ಮೇಲ್ಮನವಿಯನ್ನು ವಜಾಗೊಳಿಸಿತು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವ ಪ್ರಕರಣವು POCSO ಕಾಯ್ದೆಯಡಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಕಾನೂನು ಮಾನದಂಡಗಳನ್ನ ಪೂರೈಸಲ್ಲ ಎಂದು ಹೈಕೋರ್ಟ್ ಒತ್ತಿ ಹೇಳಿದೆ.
ಅಟಾರ್ನಿ ಜನರಲ್ ಫಾರ್ ಇಂಡಿಯಾ ವರ್ಸಸ್ ಸತೀಶ್ (2021) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ಕಾಯ್ದೆಯ ಸೆಕ್ಷನ್ 7ರಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುವ ಸ್ಪಷ್ಟ ಉದ್ದೇಶದಿಂದ ಲೈಂಗಿಕ ಹೇಳಿಕೆಯನ್ನು ಬೆಂಬಲಿಸಬೇಕು ನ್ಯಾಯಾಲಯ ಹೇಳಿದೆ.