ನಾಳೆಯೇ ಸಂಕ್ರಾಂತಿ ಹಬ್ಬ. ಬಹುತೇಕ ಮನೆಗಳಲ್ಲಿ ಇವತ್ತಿನಿಂದಲೇ ಸಿಹಿ ತಿನಿಸುಗಳ ತಯಾರಿ ಭರ್ಜರಿಯಿಂದ ಸಾಗಿದೆ. ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಪೊಂಗಲ್ ಎಲ್ಲರಿಗೂ ತಿಳಿದದ್ದೇ. ಅವುಗಳನ್ನು ಹೊರತುಪಡಿಸಿ ಸಂಕ್ರಾಂತಿ ದಿನದಂದು ವಿವಿಧೆಡೆ ಮಾಡುವ ತಿನಿಸುಗಳನ್ನು ಹೇಗೆ ಮಾಡುವುದು ಎಂದು ನೋಡೋಣ
ಅವಲಕ್ಕಿ ಸಿಹಿ ಪೊಂಗಲ್
ಬೇಕಾಗುವ ಸಾಮಗ್ರಿಗಳು: ಅವಲಕ್ಕಿ- 1 ಕಪ್ ಹೆಸರು ಬೇಳೆ- 1 ಕಪ್ ಬೆಲ್ಲ - 1 ಕಪ್ ್ಣೆಂಗಿನಕಾಯಿ- 2/1 ಕಪ್ ಹಾಲು- 1 ಕಪ್ ತುಪ್ಪ ಪ್ಪ- 1ಚಮಚ ಗೋಡಂಬಿ, ಒಣದ್ರಾಕ್ಷಿ -ಸ್ವಲ್ಪ
ಮಾಡುವ ವಿಧಾನ: ಹೆಸರು ಬೇಳೆ ಸ್ವಲ್ಪವೇ ಗೋಲ್ಡನ್ ಕಲರ್ ಬರುವವರೆಗೆ ಹುರಿದುಕೊಳ್ಳಿ. ಅದಕ್ಕೆ ನೀರು, ಅರಶಿಣ ಹಾಕಿ ಕುಕ್ಕರ್ನಲ್ಲಿ ಎರಡು ವಿಶಲ್ ಬರುವವರೆಗೆ ಕೂಗಿಸಿ. ಇನ್ನೊಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಇಟ್ಟುಕೊಂಡಿರಿ. ಅನಂತರ ಕುಕ್ಕರ್ನಲ್ಲಿ ಬೇಯಲು ಇಟ್ಟ ಹೆಸರು ಬೇಳೆಗೆ ಅವಲಕ್ಕಿಯನ್ನು ಸೇರಿಸಿ, ಅದಕ್ಕೆ ಬೆಲ್ಲದ ನೀರು ಹಾಗೂ ತೆಂಗಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಹಾಲನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಹುರಿದಿಟ್ಟ ದ್ರಾಕ್ಷಿ, ಗೋಡಂಬಿ ಹಾಕಿ.