ನ್ಯೂಸ್

ಜಗನ್ನಾಥನೇ ರಕ್ಷಿಸಿದ್ದಾನೆ... ಸಮುದ್ರದಲ್ಲಿ ದೋಣಿ ಮಗುಚಿ ಗಂಗೂಲಿ ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಪಾರು! | Ganguly

Ganguly: ಪುರಿ ಸಮುದ್ರದಲ್ಲಿ ಶನಿವಾರ ಸಂಜೆ ಜಲ ಕ್ರೀಡೆಯ ಸಮಯದ ವೇಳೆ ದೋಣಿಯೊಂದು ಮಗುಚಿ ಬಿದ್ದಿದ್ದು, ಬೋಟ್​ನಲ್ಲಿದ್ದ ಭಾರತೀಯ ಕ್ರಿಕೆಟ್​ನ ಮಾಜಿ ಆಟಗಾರ ಸೌರವ್​ ಗಂಗೂಲಿ ಹಿರಿಯ ಸಹೋದರ ಮತ್ತು ಅವರ ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಬೋಟ್​ ಮುಳುಗಿದ ತಕ್ಷಣ ಎಚ್ಚೆತ್ತ ಜೀವರಕ್ಷಕ ಸಿಬ್ಬಂದಿ(Lifeguard) ಕೂಡಲೇ ಅವರನ್ನು ರಕ್ಷಿಸಿದ್ದಾರೆ. ದೋಣಿ ಮೊಗಚಿ ಬಿದ್ದ ದೃಶ್ಯಗಳು ಸೋಮವಾರ ಸಾಮಾಜಿಕ ಜಾಲತಾಣಲದಲ್ಲಿ ವೈರಲ್​ ಆದ ಬಳಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪುರಿ ಜಿಲ್ಲಾಡಳಿತ ಇದೀಗ ತನಿಖೆ ಆಂಭಿಸಿದೆ.

ಅಪಘಾತದ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದೇವೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್​ ಶಂಕರ್​ ತಿಳಿಸಿದ್ದಾರೆ.

ಗಂಗೂಲಿ ಕುಟುಂಬಸ್ಥರು ಹೇಳಿದ್ದೇನು..?

''ನಾನು ಇನ್ನು ಅಪಘಾತದಲ್ಲಿದ್ದೇನೆ. ಇದು ತುಂಬಾ ಅದೃಷ್ಟದಿಂದ ಪಾರಾಗಿದ್ದೇವೆ. ಕೂಡಲೇ ನಮ್ಮ ರಕ್ಷಣೆ ಬಂದ ಜೀವರಕ್ಷರಿಗೆ ಧನ್ಯವಾದಗಳು'' ಎಂದು ಗಂಗೂಲಿ ಹಿರಿಯ ಸಹೋದರ ಸ್ನೇಹಶಿಶ್​ ಗಂಗೂಲಿ ಹೇಳಿದ್ದಾರೆ.

"ಒಂದು ಕ್ಷಣ, ಇದು ಅಂತ್ಯ ಎಂದು ನಾವು ಭಾವಿಸಿದೆವು. ಜಗನ್ನಾಥ ದೇವರು ನಮ್ಮನ್ನು ರಕ್ಷಿಸಿದನು. ದೋಣಿ ನಿರ್ವಾಹಕರಿಗೆ ಮಾನ್ಯ ಪರವಾನಗಿ ಇದೆ ಎಂದು ಸರ್ಕಾರ ನಿರ್ಧರಿಸಬೇಕು. ಜಲ ಚಟುವಟಿಕೆಗಳಲ್ಲಿ ಸುರಕ್ಷತೆಯು ಆದ್ಯತೆಯಾಗಿರುತ್ತದೆ" ಎಂದು ಸ್ನೇಹಶಿಶ್​ ಗಂಗೂಲಿ ಪತ್ನಿ ಅರ್ಪಿತಾ ಭಯಾನಕ ಕ್ಷಣವನ್ನು ವಿವರಿಸಿದರು.(ಏಜೆನ್ಸೀಸ್​)