ನ್ಯೂಸ್

ಕರೊನಾ ಬುಲೆಟಿನ್​: ಒಂದೇ ದಿನ 7,184 ಸೋಂಕಿತರು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 7,184 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಇದುವರೆಗಿನ ಸೋಂಕಿತರ ಪ್ರಮಾಣ ಒಟ್ಟಿಗೆ 7,58,574ಕ್ಕೆ ತಲುಪಿದೆ.

ಮತ್ತೊಂದೆಡೆ ಗುಣಮುಖರಾಗಿರುವವರ ಪೈಕಿ ಒಂದೇ ದಿನ 8,893 ಮಂದಿ ಆಸ್ಪತ್ರೆ ಹಾಗೂ ಕೋವಿಡ್​ ಕೇರ್ ಸೆಂಟರ್​ಗಳಿಂದ ಬಿಡುಗಡೆ ಆಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಗುಣವಾಗಿರುವವರ ಸಂಖ್ಯೆ ಒಟ್ಟು 6,37,481ಕ್ಕೆ ಏರಿಕೆಯಾಗಿದೆ.

ಅದಾಗ್ಯೂ ರಾಜ್ಯದಲ್ಲಿ 1,10,647 ಪ್ರಕರಣಗಳು ಸಕ್ರಿಯವಾಗಿದ್ದು, ಅವರಲ್ಲಿ ಗಂಭೀರ ರೋಗಲಕ್ಷಣಗಳಿರುವ 940 ಸೋಂಕಿತರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಸರದ ಸಂಗತಿ ಎಂದರೆ, ಸೋಂಕಿತರ ಪೈಕಿ ಶನಿವಾರ ಒಂದೇ ದಿನ 71 ಮಂದಿ ಕರೊನಾಗೆ ಬಲಿಯಾಗಿದ್ದು, ಕರೊನಾದಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಒಟ್ಟು 10,427ಕ್ಕೆ ತಲುಪಿದೆ.