ಬೆಂಗಳೂರು: ( satish jarakiholi purchased new helicopter ) ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ 30 ಕೋಟಿ ರೂ. ಬೆಲೆಬಾಳುವ ಹೆಲಿಕಾಪ್ಟರ್ನ್ನು ಖರೀದಿಸಿದ್ದಾರೆ. ಈ ಕುರಿತಾದ ಕೆಲವು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಹಳೆ ಹೆಲಿಕಾಪ್ಟರ್ ಮಾರಾಟ ಮಾಡಿ ಹೊಸ ಇಟಲಿ ಮೇಡ್ ಡಬಲ್ ಇಂಜಿನ್ ಅಗಸ್ಟ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ. ಈ ಹೆಲಿಕಾಪ್ಟರ್‌ನ ಬೆಲೆ 30 ಕೋಟಿ ರೂ.. ಅಗಸ್ಟ ಡಬಲ್ ಇಂಜಿನ್ ಹೆಲಿಕಾಪ್ಟರ್ ಆಗಿದೆ. ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಹೊಂದಿದ್ದರು.
ಜಕ್ಕೂರಿನಲ್ಲಿ ಚಾಪರ್ ಅಸೆಂಬಲ್ ಕಾರ್ಯ ನಡೆಯುತ್ತಿದ್ದು, ನಾಲ್ಕೈದು ದಿನದಲ್ಲಿ ಸಂಪೂರ್ಣವಾಗಿ ಅಸೆಂಬಲ್ ಆಗಿ ಹಾರಟಕ್ಕೆ ಸಿದ್ದವಾಗಲಿದೆ.
ಡಬಲ್ ಎಂಜಿನ್‌ನ ಹೆಲಿಕಾಪ್ಟರ್ ಇದಾಗಿದ್ದು, 6 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ ಪ್ರಯಾಣಿಸಬಹುದಾಗಿದೆ. ಈ ಚಾಪರ್ನನ್ನು ಜರ್ಮನಿಯಿಂದ ಖರೀದಿ ಮಾಡಲಾಗಿದ್ದು, ಅಗಸ್ಡ ಕಂಪನಿ ಈ ಹೆಲಿಕಾಪ್ಟರ್ ಸಿದ್ದಪಡಿಸಿದೆ . ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನೂ ಹೊಂದಿದೆ.
ಈಗಾಗಲೇ ಉತ್ತರ ಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಸತೀಶ್ ಜಾರಕಿಹೊಳಿ, ಈಗ ಆಧುನಿಕ ಹೆಲಿಕಾಪ್ಟರ್ ಖರೀದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.