ಪ್ರಶ್ನೆ: ಅವಿವಾಹಿತ ಮಹಿಳೆ ಸರ್ಕಾರಿ ಸೇವೆಯಲ್ಲಿದ್ದಾಗ ಮರಣ ಹೊಂದಿದರೆ ಅವಳ ಅವಿವಾಹಿತ ಸಹೋದರನಿಗೆ ಅನುಕಂಪ ಆಧಾರಿತ ನೌಕರಿ ದೊರೆಯುವುದೇ?
| ಡಿ.ಎಸ್. ಚೌಗಲೆ, ಗದಗ
ಉತ್ತರ: ಕರ್ನಾಟಕ ಸಿವಿಲ್ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3ರ ರೀತ್ಯ ಮೃತ ಸರ್ಕಾರಿ ನೌಕರನ ಅವಲಂಬಿತರಾದ ಸಹೋದರರೂ ಅನುಕಂಪ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದ ಕಾರಣ ನೀವು ಸಹ ಅನುಕಂಪದ ನೇಮಕಕ್ಕೆ ಸಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.