ನ್ಯೂಸ್

ಸರ್ಕಾರಿ ಕಾರ್ನರ್​: ಹೆಚ್ಚುವರಿ ವೇತನ ಬಡ್ತಿ ನಿಯಾಮಾವಳಿ

suchetana

ಪ್ರಶ್ನೆ: 1996ರಿಂದ ಅನುದಾನಿತ ಪ್ರೌಢಶಾಲೆಯಲ್ಲಿ ಸಹಶಿಕ್ಷಕನಾಗಿ ಕೆಲಸ ಮಾಡಿ, 2020ರಲ್ಲಿ ಪದವಿಪೂರ್ವ ಶಿಕ್ಷಣದ ಉಪನ್ಯಾಸಕನಾಗಿ ಪದೋನ್ನತಿ ಪಡೆದಿದ್ದೇನೆ. ನನಗೆ 25 ವರ್ಷದ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೇ?
| ಬಿ.ಕೆ.ಪಾಟೀಲ್​, ವಿಜಯನಗರ

ಉತ್ತರ: ಪದೋನ್ನತಿ ಪಡೆದ ಸರ್ಕಾರಿ ನೌಕರನಿಗೆ 25 ವರ್ಷ ಸೇವೆ ಸಲ್ಲಿಸಿದ್ದಕ್ಕೆ ಹೆಚ್ಚುವರಿ ವೇತನ ಬಡ್ತಿ ನೀಡಬೇಕೆಂದು ಸೂಚಿಸಲಾಗಿದೆ. ಆದರೆ, ಕನಿಷ್ಠ ಒಂದು ಪದೋನ್ನತಿ ಪಡೆದವರಿಗೆ ಈ ಹೆಚ್ಚುವರಿ ವೇತನ ಬಡ್ತಿ ನೀಡಬಾರದೆಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗಾಗಿ ನಿಮಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.