ನ್ಯೂಸ್

ಸರ್ಕಾರಿ ಕಾರ್ನರ್​: ಸೇವಾ ಅವಧಿ ಪರಿಗಣನೆ ನಿಯಮಾವಳಿ

suchetana

ಪ್ರಶ್ನೆ: ಕರ್ನಾಟಕ ಹಾಲು ಒಕ್ಕೂಟದ ಮೈಸೂರು ಮಿಲ್ಕ್​ ಡೇರಿಯಲ್ಲಿ 2018ರಿಂದ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ನೌಕರಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಂಕಣದಲ್ಲಿ ನೀವು ಸರ್ಕಾರಿ ನೌಕರರೇ? ಎಂದು ಕೇಳಲಾಗುತ್ತದೆ. ನಾವು ಸರ್ಕಾರಿ ನೌಕರರೇ? ನಮ್ಮ ಸೇವಾ ಅವಧಿಯನ್ನು ಸರ್ಕಾರದ ಇತರ ಹುದ್ದೆಗಳಿಗೆ ಆಯ್ಕೆಯಾದರೆ ಪರಿಗಣಿಸಲಾಗುವುದೇ?
| ಶರತ್​ ಕುಮಾರ್​, ಮೈಸೂರು

ಉತ್ತರ: ನೀವು ಕೆಲಸ ಮಾಡುತ್ತಿರುವ ಮೈಸೂರು ಮಿಲ್ಕ್​ ಡೇರಿಯು ಸರ್ಕಾರದ ಇಲಾಖೆಯಾಗಿರದೆ ಅದು ಅರೆ ಸರ್ಕಾರಿ ಸಂಸ್ಥೆಯಾಗಿದೆ. ಹೀಗಿರುವಾಗ ನೀವು ಸರ್ಕಾರಿ ನೌಕರರಲ್ಲ. ಆದ್ದರಿಂದ ನಿಮ್ಮ ಸೇವೆಯನ್ನು ಸರ್ಕಾರಿ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.