ಪ್ರಶ್ನೆ: ಗಂಡ-ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಜಮೀನು ಖರೀದಿಸಲು ಅವಕಾಶವಿದೆಯೇ? ಯಾವ ನಿಯಮದಡಿ ಜಮೀನು ಖರೀದಿಸಬಹುದು?
| ಚಂದ್ರಮೌಳಿ, ಮಂಗಳೂರು
ಉತ್ತರ: ಕರ್ನಾಟಕ ಸಿವಿಲ್ ಸೇವಾ(ನಡತೆ) ನಿಯಮಗಳು-2021ರ ನಿಯಮ 24ರಡಿ ಯಾರೇ ಸರ್ಕಾರಿ ನೌಕರರು ಸ್ಥಿರ ಅಥವಾ ಚರಾಸ್ಥಿ ಖರೀದಿಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಹೀಗೆ ಸ್ಥಿರಾಸ್ಥಿ ಖರೀದಿಸಿದ ಮೇಲೆ ಮುಂದಿನ ಆಸ್ತಿ ಮತ್ತು ಋಣ ಪಟ್ಟಿಕೆಯಲ್ಲಿ ಇಬ್ಬರೂ ನೌಕರರು ಸರ್ಕಾರಕ್ಕೆ ತಿಳಿಸಬೇಕು. ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ "ನಡತೆ ನಿಯಮಗಳು-ಸಮಗ್ರ ಕೈಪಿಡಿ' ಪುಸ್ತಕ ನೋಡಬಹುದು.