ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿದ್ದೇನೆ. ನನಗೆ ಒಬ್ಬ ಮಗನಿದ್ದಾನೆ. ನನ್ನ ಪತ್ನಿಯ ಗರ್ಭಕೋಶದಲ್ಲಿ ತೊಂದರೆ ಇದ್ದ ಕಾರಣ ಶಸ್ತ್ರಚಿಕಿತ್ಸೆಯಿಂದ ಅದನ್ನು ತೆಗೆಸಲಾಗಿದೆ. ಹಾಗಾಗಿ ಕುಟುಂಬ ಯೋಜನೆ ಅನುಸರಣೆ ಕಾರಣಕ್ಕೆ ನಾನು ಒಂದು ವಿಶೇಷ ವೇತನ ಬಡ್ತಿ ಪಡೆಯಲು ಅರ್ಹನಾಗುತ್ತೇನೆಯೇ?
| ಕೃಷ್ಣಮೂರ್ತಿ ಮಂಡ್ಯ
ದಿನಾಂಕ- 01.10.1985ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ27/ಎಸ್ಆರ್ಎಸ್ 85ರಂತೆ ಪುರುಷ ಸರ್ಕಾರಿ ನೌಕರನಾದರೆ 50 ವರ್ಷದೊಳಗಿದ್ದು, ಆತನ ಪತ್ನಿ 20 ರಿಂದ 45 ವರ್ಷದೊಳಗಿನವರಾಗಿದ್ದು, ಆಕೆಯು ಟ್ಯುಬೆಕ್ಟಮಿ ಅಥವಾ ಲೆಪ್ರೋಸ್ಕೊಪಿ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಿದ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ಈ ವಿಶೇಷ ವೇತನ ಬಡ್ತಿ ಲಭ್ಯವಾಗುತ್ತದೆ. ಗರ್ಭಕೋಶ ತೆಗೆಸುವುದಕ್ಕೆ ಇದು ಅನ್ವಯಿಸುವುದಿಲ್ಲ.