ನಾನು ಸರ್ಕಾರಿ ಇಲಾಖೆಯಲ್ಲಿ ಶೀಘ್ರಲಿಪಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ನನಗೀಗ 54 ವರ್ಷ. ನಾನು ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕಡ್ಡಾಯವಾಗಿರುವ ಈ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು?
| ಜಯಲಕ್ಷ್ಮಿ ಕೊಪ್ಪಳ
ಕರ್ನಾಟಕ ಸಿವಿಲ್ ಸೇವಾ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಿಯಮಗಳು 2012ರ ರೀತ್ಯ ದಿನಾಂಕ 7.3.2012ಕ್ಕೆ 50 ವರ್ಷ ಪೂರೈಸಿದ ನೌಕರರಿಗೆ ಈ ಪರೀಕ್ಷೆ ಯಿಂದ ವಿನಾಯಿತಿ ನೀಡಲಾಗಿದೆ. ಆದರೆ ನೀವು ತದನಂತರದ ದಿನಾಂಕದಲ್ಲಿ 54 ವರ್ಷವಾಗಿರುವುದರಿಂದ ನೀವು ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ವಿವರ ಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದಾಗಿದೆ.