ನ್ಯೂಸ್

ಸರ್ಕಾರಿ ಕಾರ್ನರ್​: ಪಿಂಚಣಿ ವರ್ಗಾವಣೆ ಹೇಗೆ?

suchetana

ಪ್ರಶ್ನೆ: ನಾನು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳ ಹುದ್ದೆಯಿಂದ ದಿನಾಂಕ : 30.12.2021ರಂದು ನಿವೃತ್ತಿ ಹೊಂದಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಪಿಂಚಣಿಯನ್ನು ಪಡೆಯುತ್ತಿದ್ದೇನೆ. ಪಿಂಚಣಿಯನ್ನು ಜೇವರ್ಗಿಯಿಂದ ಕಲಬುರಗಿ ನಗರಕ್ಕೆ ವರ್ಗಾವಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ನಿಯಮಾವಳಿಗಳಲ್ಲಿ ಅವಕಾಶವಿದೆಯೇ?
-ಶಿವಶರಣಪ್ಪ, ಕಲ್ಬರ್ಗಿ

ಉತ್ತರ : ಕರ್ನಾಟಕ ಖಜಾನೆ ಸಂಹಿತೆಯ ಅನುಚ್ಛೇದ 199ರಂತೆ ನೀವು ಜೇವರ್ಗಿ ಉಪ ಖಜಾನಾಧಿಕಾರಿಗೆ ನಿಮ್ಮ ಪಿಂಚಣಿ ದಾಖಲೆಗಳನ್ನು ಕಲಬುರಗಿ ಜಿಲ್ಲಾ ಖಜಾನಾಧಿಕಾರಿಗಳಿಗೆ ಕಳುಹಿಸಲು ವಿನಂತಿಸಬೇಕು. ಈ ವಿನಂತಿ ಪತ್ರದೊಡನೆ ನಿಮ್ಮ ಪಿಂಚಣಿ ಪಾವತಿ ಆದೇಶ (ಪಿಪಿಒ) ಹಾಗೂ ಕಲಬುರಗಿ ನಗರದ ಬ್ಯಾಂಕ್​ ಖಾತೆಯ ವಿವರಗಳನ್ನು ಸಲ್ಲಿಸಿ, ವರ್ಗಾವಣೆ ಮಾಡಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಖಜಾನೆ ಸಂಹಿತೆ ಎಂಬ ಪುಸ್ತಕವನ್ನು ನೋಡಬಹುದು.