ನ್ಯೂಸ್

ಸರ್ಕಾರಿ ಕಾರ್ನರ್​: ವಿಶೇಷ ಮುಂಬಡ್ತಿ ಪಡೆಯಲು ಅವಕಾಶ

suchetana

ಪ್ರಶ್ನೆ: 1995ರಲ್ಲಿ ಉಪನ್ಯಾಸಕನಾಗಿ ನಾನು ಸರ್ಕಾರಿ ಕೆಲಸಕ್ಕೆ ಸೇರಿದ್ದು, 2005ರಲ್ಲಿ ಕಾಲಮಿತಿ ವೇತನ ಬಡ್ತಿ ಪಡೆದಿದ್ದೇನೆ. 2006ರಲ್ಲಿ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿದ್ದು, 2022ರವರೆಗೆ ಒಂದೇ ಹುದ್ದೆಯಲ್ಲಿ 16 ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಹಾಗಾಗಿ ನಾನು 15 ವರ್ಷಗಳ ಹೆಚ್ಚುವರಿ ವೇತನ ಸ್ವಯಂಚಾಲಿತ ವಿಶೇಷ ಮುಂಬಡ್ತಿ ಪಡೆಯಲು ಅವಕಾಶವಿದೆಯೇ?

| ವಿಜಯಲಕ್ಷ್ಮಿ, ಬಳ್ಳಾರಿ

ಉತ್ತರ: 1991ರ ಕರ್ನಾಟಕ ಸಿವಿಲ್​ಸೇವಾ (ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ಬಡ್ತಿ) ನಿಯಮಾವಳಿಯ ನಿಯಮ 3ರಂತೆ ಒಂದೇ ಹುದ್ದೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದರೆ ಅಂಥ ಸರ್ಕಾರಿ ನೌಕರರು ಸ್ವಯಂ ಚಾಲಿತ ಬಡ್ತಿಗೆ ಅರ್ಹರಾಗುತ್ತಾರೆ. ಆದ ಕಾರಣ ನೀವು ಪ್ರಾಂಶುಪಾಲರಾಗಿ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಸ್ವಯಂಚಾಲಿತ ವಿಶೇಷ ಮುಂಬಡ್ತಿ ಪಡೆಯಲು ಅರ್ಹರಾಗಿರುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.