ಪ್ರಶ್ನೆ: ನಾನು ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕನಾಗಿ ಆಯ್ಕೆಗೊಂಡು ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು 25 ವರ್ಷ ಸೇವೆ ಪೂರೈಸಿದ್ದು ಈಗ ನನಗೆ 52 ವರ್ಷ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ವೈಯಕ್ತಿಕ ಕಾರಣಗಳಿಗಾಗಿ ಸ್ವಇಚ್ಛೆ ನಿವೃತ್ತಿ ಪಡೆದಲ್ಲಿ ನನಗೆ ಸಿಗುವ ಅರ್ಹತಾದಾಯಕ ಸೇವೆ ಎಷ್ಟು? ಹಾಗೂ ಸಿಗುವ ನಿವೃತ್ತಿ ಸೌಲಭ್ಯಗಳು ಯಾವುವು?
ನಂದೀಶ್ ಹಾವೇರಿ
ಉತ್ತರ : ನೀವು ವೈಯಕ್ತಿಕ ಕಾರಣಗಳಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2)ರಂತೆ ಸ್ವಇಚ್ಛೆ ನಿವೃತ್ತಿ ಪಡೆದರೆ ನಿಮಗೆ 5 ವರ್ಷಗಳವರೆಗಿನ ಸೇವಾ ಅಧಿಕ್ಯವನ್ನು (ವೆಟೇಜ್) ಪಡೆಯುವುದರಿಂದ ನಿಮಗೆ ನಿಮ್ಮ ಮೂಲ ವೇತನದ ಶೇ.50ರಷ್ಟು ಮೊಬಲಗು ನಿವೃತ್ತಿ ವೇತನವಾಗಿ ಲಭ್ಯವಾಗುವುದು. ಅಲ್ಲದೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ನಿಮಗೆ ನಿವೃತ್ತಿ ಉಪದಾನ, ಕಂಮ್ಯೂಟೇಷನ್ ಮುಂತಾದ ಎಲ್ಲ ಸೇವಾ ಸೌಲಭ್ಯಗಳು ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕವನ್ನು ನೋಡಬಹುದು.