ಪ್ರಾಥಮಿಕ ಶಾಲಾ ಶಿಕ್ಷಕನಾದ ನಾನು, ನಮ್ಮ ಶಾಲೆಯಲ್ಲಿ ಖಾಲಿ ಇರುವ ಮುಖ್ಯೋಪಾಧ್ಯಾಯರ ಹುದ್ದೆಯಲ್ಲಿ 5 ತಿಂಗಳಿಂದ ಪ್ರಭಾರ ಆಗಿದ್ದೇನೆ. ನನಗೆ ಪ್ರಭಾರ ಭತ್ಯೆ ದೊರಕುವುದೇ?
| ಕೊಟ್ರೆಶ್ ಹೈದ್ರಿ ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ಕ್ಕೆ ಅನುಸಾರವಾಗಿ ನೀವು ಮುಖ್ಯೋಪಾಧ್ಯಾಯರ ಹುದ್ದೆಯಲ್ಲಿ ಪ್ರಭಾರದಲ್ಲಿದ್ದರೆ ನಿಯಮ 68ರ ಮೇರೆಗೆ ಮೊದಲ 3 ತಿಂಗಳಿಗೆ ಶೇ.7.5 ಹಾಗೂ ಮೂರು ತಿಂಗಳ ನಂತರ ಪ್ರಭಾರದಲ್ಲಿದ್ದರೆ ಮುಖ್ಯೋಪಾಧ್ಯಯರ ವೇತನ ಶ್ರೇಣಿಯಲ್ಲಿ ಪ್ರಭಾರ ಭತ್ಯೆ ಪಡೆಯಲು ಅರ್ಹರಾ ಗುತ್ತೀರಿ. ನಿಮ್ಮ ಮೇಲಧಿಕಾರಿಗಳಿಗೆ ಈ ನಿಯಮದ ಪ್ರಕಾರ ಅರ್ಜಿ ಸಲ್ಲಿಸಬಹುದು.