ನ್ಯೂಸ್

ಸರ್ಕಾರಿ ಕಾರ್ನರ್ : ಪಿಂಚಣಿದಾರರಿಗೆ ಚಿಕಿತ್ಸಾ ವೆಚ್ಚ ಸಿಗುವುದೇ?

Webdesk - Ravikanth
ದಿನದ ಪ್ರಶ್ನೆ 

ನನ್ನ ಸ್ನೇಹಿತ ಸರ್ಕಾರಿ ನೌಕರನಾಗಿದ್ದು, ಅವನ ಅವಲಂಬಿತ ತಾಯಿಯು 9,000 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ಸೌಲಭ್ಯ ಪಡೆದುಕೊಳ್ಳಬಹುದೇ?

| ಗುರುರಾಜ್ ಕೋಲಾರ

ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಚಿಕಿತ್ಸಾ) ನಿಯಮಾವಳಿ 1963ರ ನಿಯಮ 2ರಲ್ಲಿ ಸರ್ಕಾರಿ ನೌಕರರ ತಂದೆ -ತಾಯಿ ಪಿಂಚಣಿದಾರರಾಗಿದ್ದು, ಅವರು ಕನಿಷ್ಠ ವೇತನ ಮತ್ತು ಅದಕ್ಕೆ ಕಾಲಕಾಲಕ್ಕೆ ಲಭ್ಯವಾದ ತುಟ್ಟಿಭತ್ಯೆ ಒಳಗೊಂಡ ಮೊಬಲಕ್ಕಿಂತ ಹೆಚ್ಚು ಪಡೆಯುವ ಪಿಂಚಣಿದಾರರಾಗಿದ್ದಲ್ಲಿ ಅವರಿಗೆ ಈ ವೈದ್ಯಕೀಯ ವೆಚ್ಚದ ಮರುಪಾವತಿ ಸೌಲಭ್ಯ ಲಭ್ಯವಾಗುವುದಿಲ್ಲ. ಆದರೆ, ನೀವು ತಿಳಿಸಿರುವ ಪ್ರಕರಣದಲ್ಲಿ ಅವಲಂಬಿತ ತಾಯಿಯು 9,000 ರೂ. ಪಡೆಯುತ್ತಿದ್ದು, ಅದು ಪ್ರಸ್ತುತ ಕನಿಷ್ಠ ವೇತನ 8,500 ರೂ. ಮತ್ತು ಅದಕ್ಕೆ ಲಭ್ಯವಾಗುವ ತುಟ್ಟಿಭತ್ಯ ಶೇ.11.25 ಕ್ಕಿಂತ ಕಡಿಮೆ ಇರುವುದರಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅರ್ಹರಾಗಿರುತ್ತಾರೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.