ನ್ಯೂಸ್

VIDEO | ತುಂಬಿ ತುಳುಕಿದ ಶಾರದಾ ನದಿ; ನೀರಿನಲ್ಲಿ ಸಿಲುಕಿದ್ದ 9 ಜನರ ರಕ್ಷಣೆ

rashmirhebbur

ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಸತತ ಮಳೆಯಿಂದಾಗಿ ಶಾರದಾ ನದಿಯು ಉಕ್ಕಿ ಹರಿಯುತ್ತಿದೆ. ಊರುಕೇರಿ, ರಸ್ತೆಗಳಿಗೆ ನೀರು ನುಗ್ಗುತ್ತಾ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ನಡುವೆ ಸ್ಥಳೀಯ ಆಡಳಿತವರ್ಗ ಮತ್ತು ಪೊಲೀಸರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ಒಬ್ಬ ಕಾರ್ಮಿಕನ ಕುಟುಂಬದ 9 ಜನರು ಟ್ರಕ್​ ಒಂದರ ಮೇಲೆ ಪ್ರಯಾಣಿಸುತ್ತಿದ್ದ ವೇಳೆ ಚಂಪಾವತ್​ ಜಿಲ್ಲೆಯ ತನಕಪುರದಲ್ಲಿ ಶಾರದಾ ನದಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ನೀರಿನ ಮಧ್ಯದಲ್ಲಿದ್ದ ಅವರನ್ನು ಸ್ಥಳೀಯ ಆಡಳಿತ, ಎಸ್​ಡಿಆರ್​ಎಫ್ ಮತ್ತು ಪೊಲೀಸರ ಸಹಾಯದೊಂದಿಗೆ ಪಾರು ಮಾಡಿದೆ. ಎಎನ್​ಐ ಸುದ್ದಿ ಸಂಸ್ಥೆ ಶೇರ್ ಮಾಡಿರುವ ಈ ವಿಡಿಯೋದಲ್ಲಿ ನೀರಿನ ಹರಿವಿನ ವೇಗ ನೋಡಬಹುದು. (ಏಜೆನ್ಸೀಸ್)