ಸರಗೂರು ತಾಲೂಕಿನ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರಿಗೆ ಲ್ಯಾಪ್ ಟಾಪ್ ಹಾಗೂ ಬೈಕ್ ವಿತರಣೆ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು, ಮೋಹನಕುಮಾರಿ, ಪ್ರೇಮ್ ಕುಮಾರ್, ಚೈತ್ರ ಸ್ವಾಮಿ, ಸಿದ್ದರಾಜು,ಉದ್ಘಾಟಿಸಿದರು. ಲಾಪ್ ಟಾಪ್ ವಿಚಾರಣೆ ಗ್ರಾಪಂ ವಿಕಲಚೇತನರು ಕಾರ್ಯನಿರ್ವಹಿಸುತ್ತಿರುವ ವಿ ಆರ್ ಡಬ್ಲ್ಯೂ ಲಾಪ್ ಟಾಪ್ ವಿತರಣೆ ಮಾಡಿದರು.
ಸರಗೂರು : ವಿಕಲಚೇತನರು ವಾಹನ ಪಡೆದರೆ ಚಾಲನಾ ಪರವಾನಗಿ ಕಡ್ಡಾಯ: ಶಾಸಕ ಅನಿಲ್ ಚಿಕ್ಕಮಾದು ವಿಕಲಚೇತನರು ಸರ್ಕಾರದಿಂದ ದ್ವಿಚಕ್ರ ವಾಹನ ಸೌಲಭ್ಯ ಪಡೆದಿರುವ ಎಲ್ಲರೂ ಕಡ್ಡಾಯವಾಗಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ. ಹಾಗೂ ಎಂ.ಆರ್.ಡಬ್ಲ್ಯೂ. ಕಾರ್ಯಕರ್ತರಿಗೆ ತಾಲೂಕು ಪಂಚಾಯಿತಿ ವತಿಯಿಂದ ಶೇ.5ರಷ್ಟು ಅನುದಾನದಡಿ ಬೈಕ್‌ಗಳು ಹಾಗೂ ಕಾರ್ಯನಿರ್ವಹಣೆಗೆ ಅಗತ್ಯವಾದ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ವಿ.ಆರ್.ಡಬ್ಲ್ಯೂ. ಹಾಗೂ ಎಂ.ಆರ್.ಡಬ್ಲ್ಯೂ. ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಬೈಕ್ ಹಾಗೂ ಲ್ಯಾಪ್‌ಟಾಪ್‌ಗಳ ವಿತರಣೆಯಿಂದ ಗ್ರಾಮಗಳಿಗೆ ಸುಲಭವಾಗಿ ಭೇಟಿ ನೀಡಿ ಕಾರ್ಯನಿರ್ವಹಿಸಲು, ಮಾಹಿತಿಯನ್ನು ತ್ವರಿತವಾಗಿ ದಾಖಲಿಸಲು ಹಾಗೂ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಪ್ರೇಮ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 1,500 ವಿಶೇಷಚೇತನರಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಲ್ಯಾಪ್‌ಟಾಪ್‌ಗಳನ್ನು ಹಾಗೂ ಅರ್ಹ ವಿಶೇಷಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎಂ.ಆರ್.ಡಬ್ಲ್ಯೂ. ಕಾರ್ಯಕರ್ತ ದೇವರಾಜು ಮಾತನಾಡಿ, ತಾಲೂಕು ಮಟ್ಟದಲ್ಲಿ ವಿಕಲಚೇತನರಿಗಾಗಿ ಸಮುದಾಯ ಭವನದ ಕೊರತೆ ಇದೆ. ಸಭೆ-ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಭವನ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ. ಕಾರ್ಯಕರ್ತರಿಗೆ ಪ್ರತ್ಯೇಕ ಕೊಠಡಿ ಹಾಗೂ ಕುಳಿತುಕೊಳ್ಳಲು ಅಗತ್ಯವಾದ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿಗಳಿಗೆ ಬರುವ ವಿಕಲಚೇತನರಿಗೆ ಸಹ ಕುಳಿತುಕೊಳ್ಳಲು ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಚೆಲುವರಾಜು, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ನಿಂಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ನರೇಗಾ ಯೋಜನೆ ಅಧಿಕಾರಿ ಮಹದೇವಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಚೆಲುವಕೃಷ್ಣ, ವಿ.ಆರ್.ಡಬ್ಲ್ಯೂ. ಕಾರ್ಯಕರ್ತರಾದ ಸೋಮೇಶ್, ಬಸವರಾಜು, ಸಂತೋಷ, ಮಹದೇವಮೂರ್ತಿ, ನಾಗೇಶ್ ,ಹಾಗೂ ಇತರರು ಉಪಸ್ಥಿತರಿದ್ದರು.