ನ್ಯೂಸ್

3 ರಂದು ಸಪ್ತಸ್ವರ ಗಾಯನ ಕಾರ್ಯಕ್ರಮ

ಕೊಳ್ಳೇಗಾಲ: ಪಟ್ಟಣದ ವಿಜಯಲಕ್ಷ್ಮಿ ಲಾಡ್ಜ್ ಮುಂಭಾಗ ಬಸ್ ನಿಲ್ದಾಣ ಹತ್ತಿರದಲ್ಲಿ ಆ.3 ರಂದು ಸಂಜೆ 6 ಗಂಟೆಗೆ ಶ್ರೀಮತಿ ಪುಟ್ಟಸಿದ್ದಮ್ಮ ನೆನಪಿನೋತ್ಸವ ಅಂಗವಾಗಿ ವಿಷ್ಣ ವಿಜಯ ಸಾರಥ್ಯದಲ್ಲಿ ಸಪ್ತಸ್ವರ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮ ಮುಖ್ಯ ಅಥಿತಿಯಾಗಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕ ಎನ್.ಮಹೇಶ್, ಎಸ್.ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ನಗರಸಭೆ ಸದಸ್ಯ ಮಂಜುನಾಥ್, ಪುಷ್ಪಲತಾ ಶಾಂತರಾಜು, ಮನೋಹರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಹೈಕೋರ್ಟ್ ವಕೀಲ ಮೋಹನ್‌ಕುಮಾರ್ ಸೇರಿದಂತೆ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.