ಕಳಸ: ಚಿತ್ರನಟಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ಬುಧವಾರ ಕಳಸದಲ್ಲಿ ಮ್ಯೂಸಿಕ್ ಪ್ರೊಡ್ಯೂಸರ್ ಮೈಸೂರಿನ ಅರುಣ್‌ಕುಮಾರ್ ಜತೆ ಸಪ್ತಪದಿ ತುಳಿದರು.
ಕಳಸದಲ್ಲಿ ಹುಟ್ಟಿ ಬೆಳೆದ ಮಾನ್ವಿತಾ ಕಾಮತ್ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಬಳಿಕ ನಟ ಶಿವರಾಜ್‌ಕುಮಾರ್ ಅವರ ಟಗರು ಸಿನಿಮಾದಲ್ಲಿ ಬಣ್ಣ ಹಚ್ಚಿ ಟಗರು ಪುಟ್ಟಿಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು. ಕನಕ, ರಿಲ್ಯಾಕ್ಸ್ ಸತ್ಯ, ಶಿವ 143, ತಾರಕಾಸುರ, ಇಂಡಿಯಾ ವರ್ಸ್‌ಸ್ ಇಂಗ್ಲೆಂಡ್, ಅಪ್ಪ ಐ ಲವ್ ಯು, ಚೌಕ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು ಮರಾಠಿಯಲ್ಲಿ ನಿರ್ಮಾಣವಾಗಿರುವ ಹ್ಯಾಪಿಲೀ ಮ್ಯಾರಿಡ್, ಬ್ಯಾಡ್, ರಾಜಸ್ಥಾನ್ ಡೈರಿಸ್ ಚಿತ್ರಗಳು ಬಿಡುಗಡೆ ಆಗಬೇಕಿದೆ.
ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಮಾನ್ವಿತಾ, ಕಳೆದ ವರ್ಷ ತಾಯಿಯನ್ನು ಕಳೆದುಕೊಂಡರು. ಮಾನ್ವಿತಾ ಕಾಮತ್ ಹಾಗೂ ಅರುಣ್‌ಕುಮಾರ್ ಕೊಂಕಣಿ ಸಂಪ್ರದಾಯದಂತೆ (ಜಿಎಸ್‌ಬಿ ಸಂಪ್ರದಾಯದಂತೆ) ಮದುವೆಯಾಗಿದ್ದಾರೆ. ಇದಕ್ಕೂ ಮುನ್ನ ಮೆಹಂದಿ, ಅರಿಶಿಣ ಶಾಸ್ತ್ರ ಜರುಗಿತು.