ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಚುನಾವಣೆ ಸಂದರ್ಭ ಡಾ.ಜೆ.ಬಿ.ಸಲ್ಡಾನಾ, ಚುನಾವಣಾ ಸಂಚಾಲಕರಾದ ನೈಜಿಲ್ ಪಿರೇರಾ, ಸಹ ಸಂಚಾಲಕ ಆಂಡ್ರ್ಯೂ ನೊರೊನ್ಹಾ ಉಪಸ್ಥಿತರಿದ್ದರು.  
ನ್ಯೂಸ್

ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಕೆಥೋಲಿಕ್ ಸಭಾ ಸಂಸ್ಥೆಯಲ್ಲಿ 81 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚನೆ
  • ಸ್ಟೀವನ್ ರಾಡ್ರಿಗಸ್ ವಲೆನ್ಸಿಯಾ ಉಪಾಧ್ಯಕ್ಷ
ಮಂಗಳೂರು: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ 2026-27ನೇ ಸಾಲಿನ ಚುನಾವಣೆ ಬಿಷಪ್ ನಿವಾಸದ ಸಭಾಂಗಣದಲ್ಲಿ ನಡೆಯಿತು. ಚುನಾವಣಾ ಸಂಚಾಲಕ ನೈಜಿಲ್ ಪಿರೇರಾ ಮತ್ತು ಸಹ ಸಂಚಾಲಕ ಆಂಡ್ರ್ಯೂ ನೊರೊನ್ಹಾ ಚುನಾವಣಾ ಪ್ರಕ್ರಿಯೆ ನಡೆಸಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 12 ವಲಯಗಳನ್ನು ಒಳಗೊಂಡ ಕೆಥೋಲಿಕ್ ಸಭಾ ಸಂಸ್ಥೆಯಲ್ಲಿ 81 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸ್ಟೀವನ್ ರಾಡ್ರಿಗಸ್ ವಲೆನ್ಸಿಯಾ, ಆಲ್ಬರ್ಟ್ ಸುನೀಲ್ ಮೋನಿಸ್, ಕಾರ್ಯದರ್ಶಿಯಾಗಿ ವಿಲ್ಮಾ ಮೊಂತೆರೊ ದೇರೆಬೈಲ್, ಜತೆ ಕಾರ್ಯದರ್ಶಿಯಾಗಿ ಟ್ರೆಸಿ ರಾಡ್ರಿಗಸ್ ಅಮ್ಮೆಂಬಳ, ಖಜಾಂಚಿಯಾಗಿ ಫ್ರಾನ್ಸಿಸ್ ಮೊಂತೆರೊ, ಸಹ ಖಜಾಂಚಿಯಾಗಿ ಸ್ಟ್ಯಾನಿ ಮಿರಾಂಡ ನೀರುಡೆ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಆಧ್ಯಾತ್ಮಿಕ ನಿರ್ದೇಶಕ ಡಾ.ಜೆ.ಬಿ.ಸಲ್ಡಾನಾ ಉಪಸ್ಥಿತರಿದ್ದರು.