ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಪತಂಜಲಿ ಜೆ.ನಾಗರಾಜ್ ಹಾಗೂ ಸಂಗಡಿಗರು ಕೈದಿಗಳಿಗೆ ಯೋಗದ ವಿವಿಧ ಆಸನಗಳನ್ನು ತಿಳಿಸಿಕೊಟ್ಟರು. 
ನ್ಯೂಸ್

ಕೈದಿಗಳ ಮಾನಸಿಕ ಪರಿವರ್ತನೆಗೆ ಸಂಜೀವಿನಿ

ಶಿವಮೊಗ್ಗ: ಕೈದಿಗಳ ಮಾನಸಿಕ ಪರಿವರ್ತನೆಗೆ ಯೋಗ ಸಂಜೀವಿನಿಯಾಗಿದೆ. ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸವನ್ನು ಮೈಗೂಡಿಸಿಕೊಂಡರೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ್ ಹೇಳಿದರು.

ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಜೂ.25ರವರೆಗೆ ಯೋಗಗುರು ಪತಂಜಲಿ ಜೆ.ನಾಗರಾಜ್ ಪ್ರತಿದಿನ ಬೆಳಗ್ಗೆ 8ರಿಂದ ಕೈದಿಗಳ ಮನ ಪರಿವರ್ತನೆಗೆ ಯೋಗಾಸನ ತರಬೇತಿ ಶಿಬಿರ ನಡೆಸಿಕೊಡುವರು ಎಂದರು.

ಅಷ್ಟಾಂಗ ಯೋಗದ ಮಹತ್ವ, ಸರಳ ವ್ಯಾಯಾಮ, ಸೂರ್ಯ ನಮಸ್ಕಾರ, ಯೋಗ, ಆಸನ, ಪ್ರಾಣಾಯಮ, ಧ್ಯಾನ, ವ್ಯಕ್ತಿತ್ವ ವಿಕಸನ, ಆಹಾರ ಕ್ರಮ, ಜೀವನ ಶೈಲಿ, ಮನ ಪರಿವರ್ತನೆಗೆ ಗೀತ ಗಾಯನ, ಯೋಗ ಪ್ರಾತ್ಯಾಕ್ಷಿಕೆ ಸೇರಿವೆ ಎಂದು ಹೇಳಿದರು.

ಯೋಗ ಶಿಕ್ಷಕ ಗೋಪಾಲಕೃಷ್ಣ, ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಪಿ.ಭವ್ಯಾ, ಪ್ರಮುಖರಾದ ಅಂಬಿಕಾ, ಲೀಲಾ, ರಮೇಶ್, ಎಂ.ಪೂವಯ್ಯ, ನರಸಿಂಹಮೂರ್ತಿ ಉಪಸ್ಥಿತರಿದ್ದರು. 400ಕ್ಕೂ ಹೆಚ್ಚು ಕೈದಿಗಳು ಭಾಗವಹಿಸಿದ್ದರು.