ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜಕೀಯ ಶುರುವಾಗಿದೆ. ಈ ಘಟನೆಯ ಬಗ್ಗೆ ಉದ್ಧವ್ ಸೇನೆಯ ನಾಯಕ ಸಂಜಯ್ ರಾವತ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೆಲವರು ಮತ ಹಾಕುತ್ತಾರೆ. ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ನಿಜವಾಗಿಯೂ ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನು ಈ ವಿಷಯವನ್ನು ಪರಿಶೀಲಿಸಿ ನಂತರ ಮಾತನಾಡುತ್ತೇನೆ. ಅದರೂ ಈ ರೀತಿ ಕಾನೂನನ್ನು ಒಬ್ಬರು ಕೈಗೆ ತೆಗೆದುಕೊಳ್ಳಬಾರದು ಎಂದರು.
ರೈತ ಪ್ರತಿಭಟನೆ ವೇಳೆ ಕಂಗನಾ ರಣಾವತ್ ಮುಂಬೈಯನ್ನು ಪಾಕಿಸ್ತಾನ ಎಂದು ಕರೆದಿದ್ದರು ಎನ್ನಲಾಗಿದೆ. ರೈತರ ಪ್ರತಿಭಟನೆ ಬಗ್ಗೆ ಕಂಗನಾ ಅವರು ಮಾಡಿದ್ದ ಕಾಮೆಂಟ್ನಿಂದ ನೋವಾಗಿದೆ ಎಂದು ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಮಹಿಳಾ ಕಾನ್ಸ್ಟೇಬಲ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ರೈತರ ಪ್ರತಿಭಟನೆಯಲ್ಲಿ ಕುಳಿತಿದ್ದ ಹೆಣ್ಣುಮಕ್ಕಳು ಮತ್ತು ಹೆಂಗಸರು ಕೂಡ ಭಾರತಮಾತೆಯ ಸಾಕಾರರೂಪವಾಗಿದ್ದರು. ಭಾರತಮಾತೆಯೂ ತಾಯಿಯೇ.. ನೀವು ಭಾರತಮಾತೆಯನ್ನು ಅಪಮಾನಿಸಿದರೆ ನೀವು ಅದರ ಬಗ್ಗೆ ಕೇಳಬೇಕು. ಆ ಮಹಿಳೆ ತಾಯಿಗಾಗಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ರೈತರ ಚಳವಳಿಯ ಬಗ್ಗೆ ಜನರು ಇನ್ನೂ ಹೇಗೆ ಕೋಪಗೊಂಡಿದ್ದಾರೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಆದರೂ ಸಂಸದರ ಮೇಲೆ ಕೈ ಎತ್ತಬಾರದು ಎಂದಿದ್ದಾರೆ. (ಏಜೆನ್ಸೀಸ್)