ನ್ಯೂಸ್

ಮಗ ಇಜಾಹಾನ್‌ ಹುಟ್ಟುಹಬ್ಬದಂದು ಭಾವುಕರಾದ ಸಾನಿಯಾ ಮಿರ್ಜಾ! Sania Mirza Emotional

ನವದೆಹಲಿ: ಭಾರತದ ಟೆನಿಸ್ ದಿಗ್ಗಜ ಸಾನಿಯಾ ಮಿರ್ಜಾ ಪ್ರಸ್ತುತ ಹೆಚ್ಚಾಗಿ ತಮ್ಮ ಕುಟುಂಬದೊಂದಿಗೆ ಇದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆ ವಿಚ್ಛೇದನ ನಂತರ ಮಗನಿಗೆ ಉತ್ತಮ ಭವಿಷ್ಯವನ್ನು ನೀಡಲು ಸಿದ್ಧರಾಗುತ್ತಿದ್ದಾರೆ. ಸಾನಿಯಾ ಇತ್ತೀಚೆಗಷ್ಟೇ ತನ್ನ ಮಗ ಇಜಾಹಾನ್‌ನ ಆರನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಈ  ವೇಳೆ  ಸಾನಿಯಾ ಭಾವನಾತ್ಮಕವಾಗಿ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

ಸಾನಿಯಾ ಅವರು ಮಗ ಇಜಾಹಾನ್‌ ಹುಟ್ಟುಹಬ್ಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು 'ನನ್ನ ಪುಟ್ಟ ಮಗು, ನೀವು ಆರು ವರ್ಷದವರಾಗಿದ್ದಿರಿ ಎಂದು ನಾನು ನಂಬಲು ಸಾಧ್ಯವಿಲ್ಲ. ನನ್ನ ನಗುವಿಗೆ ನೀನೇ ಕಾರಣ. ‘ಹುಟ್ಟುಹಬ್ಬದ ಶುಭಾಶಯಗಳು ಮೈ ಲಡ್ಡು’ ಎಂದು ಹೇಳುವ ಮೂಲಕ ಸಾನಿಯಾ ಮಗನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಇಜಹಾನ್ ಹುಟ್ಟುಹಬ್ಬದ ಫೋಟೋಗಳು ಕೂಡ ಎಲ್ಲರ ಮನಸೆಳೆಯುತ್ತಿವೆ. ಇದನ್ನು ನೋಡಿದ ನೆಟ್ಟಿಗರು ಸಾನಿಯಾ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಾಮೆಂಟ್​ ಮೂಲಕವಾಗಿ ತಿಳಿಸಿದ್ದಾರೆ.

ಸಾನಿಯಾ ಮಿರ್ಜಾ 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು.    2018  ಅಕ್ಟೋಬರ್30 ರಂದು ಮಗನಿಗೆ ಜನ್ಮ ನೀಡಿದರು. ಆದರೆ ಕೆಲ ತಿಂಗಳ ಹಿಂದೆ ಸಾನಿಯಾ-ಶೋಯೆಬ್ ವಿಚ್ಛೇದನ ಪಡೆದಿದ್ದರು. ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಮಗ ಇಜಹಾನ್ ತನ್ನ ತಾಯಿ ಸಾನಿಯಾ ಜೊತೆಯಲ್ಲಿದ್ದಾನೆ.