ಸಂಡೂರಿನ ದೇವಗಿರಿಯಲ್ಲಿ ನಕ್ಷತ್ರ ಉದ್ಯಾನವನ್ನು ಗಣಿ ಬ್ಯೂರೋದ ಪ್ರಾದೇಶಿಕ ನಿಯಂತ್ರಕ ಸುರೇಶ್ ಪ್ರಸಾದ್ ಉದ್ಘಾಟಿಸಿದರು. ಭಾರತೀಯ ಗಣಿ ಬ್ಯೂರೋದ ಹಿರಿಯ ಗಣಿ ಭೂ ವಿಜ್ಞಾನಿ ಡಾ.ಟಿ.ಎಲ್.ಸುಧಾಕರ್, ಸ್ಮಯೋರ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣೇಂದು ಸನ್ಯಾಲ್ ಇದ್ದರು. 
ನ್ಯೂಸ್

ಎಲ್ಲೆಡೆ ಸ್ವಚ್ಛತೆ ಕಾಪಾಡಲು ನಿರಂತರ ಪ್ರಯತ್ನ ಅಗತ್ಯ

ನರೇಶ್ ಕುಮಾರ್

ಸಂಡೂರು: ತಾಲೂಕಿನ ದೇವಗಿರಿ ಗ್ರಾಮದಲ್ಲಿ ಸ್ಮಯೋರ್ ಗಣಿ ಕಂಪನಿ, ಕೇಂದ್ರ ಗಣಿ ಸಚಿವಾಲಯ, ಭಾರತೀಯ ಗಣಿ ಬ್ಯೂರೋ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.

ಭಾರತೀಯ ಗಣಿ ಬ್ಯೂರೋದ ಗಣಿಗಳ ಪ್ರಾದೇಶಿಕ ನಿಯಂತ್ರಕ ಡಾ.ಸುರೇಶ್ ಪ್ರಸಾದ್ ಮಾತನಾಡಿ, ಜೀವನದ ಎಲ್ಲ ರಂಗಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ನಿರಂತರ ಪ್ರಯತ್ನಗಳಾಗಬೇಕು. ಅಲ್ಲದೆ ಇಲ್ಲಿನ ನಕ್ಷತ್ರ ಉದ್ಯಾನವನ್ನು ಕೇವಲ 15 ದಿನಗಳಲ್ಲಿ ಸ್ಮಯೋರ್ ಸಂಸ್ಥೆ ಅಭವೃದ್ಧಿಪಡಿಸಿದ್ದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಮಯೋರ್ ಸಂಸ್ಥೆ ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಸಹಾಯಕ ಗಣಿ ಇಂಜಿನಿಯರ್ ಅಶೋಕ್ ಪಾಣಿ, ಬಚಲಪ್ಪ, ವೆಂಕಟೇಶ್ವರರಾವ್, ಸುರೇಶ್ ಯಾದವ್ ಇತರರಿದ್ದರು.

ಸ್ವಚ್ಛತಾ ಹೀ ಸೇವಾದ ಆಂಗವಾಗಿ ಪ್ರಬಂಧ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ದೀಪಕ್ ಅನಿಲ್ ಕುಕ್ಕೆ, ವಂದನಾರ್ಪಣೆಯನ್ನು ಪ್ರಧಾನ ವ್ಯವಸ್ಥಾಪಕ ಎಲ್.ಡಿ.ಬಾಬು ನಿರ್ವಹಿಸಿದರು.