ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶ್ರೀಮತಿ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಶಿವರಾಮ್ ಹರಿ ರಾಜ್‌ಗುರು ಅವರ 116ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳು. 
ನ್ಯೂಸ್

ರಾಜ್‌ಗುರು ದೇಶಸೇವೆ ಸ್ಮರಣೀಯ

ಸಂಡೂರು: ದೇಶಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್‌ಸಿಂಗ್ ಜತೆ ಪ್ರಾಣಾರ್ಪಣೆ ಮಾಡಿದ ಸುಖದೇವ ಮತ್ತು ಶಿವರಾಮ ಹರಿ ರಾಜ್‌ಗುರು ಅವರ ಹೋರಾಟ, ಉತ್ಸಾಹ, ತ್ಯಾಗ ಮರೆಯುವಂತಿಲ್ಲ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್.ನಾನಾವಟೆ ತಿಳಿಸಿದರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶ್ರೀಮತಿ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ದೇಶಪ್ರೇಮಿ ಶಿವರಾಮ್ ರಾಜ್‌ಗುರು ಅವರ 116ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ರಾಜ್‌ಗುರು ದೇಶಸೇವೆಗೆ ಕಂಕಣ ಬದ್ಧರಾದರು. ಅವರದು ಸರಳ ಸಜ್ಜನಿಕೆಯ ವ್ಯಕ್ತಿತ್ವವಾಗಿತ್ತು. ದೇಶಕ್ಕಾಗಿ ಹೋರಾಡಲು ಹಿಂಜರಿಯಲಿಲ್ಲ. ಲಾಲ್ ಲಜಪತ್‌ರಾಯರು ಬ್ರಿಟಿಷ್ ಪೋಲಿಸ್ ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾಗಿ ಸಾವಿಗೀಡಾದಾಗ ಸೇಡು ತೀರಿಸಿಕೊಳ್ಳಲು ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಒಂದಾಗಿ ಜೆಪಿ ಸಾಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಕೊಂದರು.

ಈ ತ್ರಿಮೂರ್ತಿಗಳನ್ನು 1931ರ ಮಾ.23ರಂದು ನೇಣಿಗೇರಿಸಲಾಯಿತು ಎಂದರು. ಪ್ರಾಚಾರ್ಯ ಯು.ದೇವರಾಜ್, ಎಂ.ಕೊಟ್ರೇಶ್, ಜಿ.ಎಂ.ಅಶೋಕ್, ಗುಡ್ಡಪ್ಪ, ಎಂ.ಸೌಜನ್ಯ, ಶ್ರೀವಿದ್ಯಾ ಇತರರಿದ್ದರು.