ನ್ಯೂಸ್

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್ | Stampede Case

ತೆಲಂಗಾಣ: ಪುಷ್ಪ-2 ಚಿತ್ರದ ಪ್ರದರ್ಶನದ ವೇಳೆ ನಡೆದ ಕಾಲ್ತುಳಿತ(Stampede Case )ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಹುಡುಗನನ್ನು ನಟ ಅಲ್ಲು ಅರ್ಜುನ್​ ಮಂಗಳವಾರ ಭೇಟಿ ಮಾಡಿದರು.

ಹೈದರಾಬಾದ್​ನ ಬೇಗಂಪೇಟ್​ನಲ್ಲಿರುವ ಕಿಮ್ಸ್​ ಆಸ್ಪತ್ರೆಯಲ್ಲಿ ದಾಖಲಾಗಿರುವ ಹುಡುಗ ಶ್ರೀತೇಜನನ್ನು ಭೇಟಿ ಮಾಡಿದ ನಟ, ಮಗುವಿನ ಆರೋಗ್ಯದ ಬಗ್ಗೆ ಮತ್ತು ಚಿಕಿತ್ಸೆ ಬಗ್ಗೆ ವಿಚಾರಿಸಿದ್ದಾರೆ.

ಆಸ್ಪತ್ರೆಗೆ ನಟ ಭೇಟಿ ಹಿನ್ನೆಲೆ ಮುಂಚಿತವಾಗಿ ಭದ್ರತೆ ಹೆಚ್ಚಿಸಲಾಗಿತ್ತು.ಜ.5ರಂದೇ ಭೇಟಿ ನೀಡಬೇಕಾಗಿತ್ತು. ಕಾರಣಾಂತರಗಳಿಂದ ಭೇಟಿ ರದ್ದು ಆಗಿ ಇಂದು ಆಸ್ಪತ್ರೆಗೆ ಬಂದಿದ್ದಾರೆ. ಇನ್ನು ನಟ ಆಸ್ಪತ್ರೆಗೆ ಬರುವ ಸಮಯದಲ್ಲಿ ಹಸಿರು ಸ್ವೆಟರ್​, ಕಪ್ಪು ಪ್ಯಾಂಟ್​ ಧರಿಸಿದ್ದರು. ಅವರ ಜತೆ ಪುಷ್ಪ ಚಿತ್ರದ ತಂಡ ಮತ್ತು ತೆಲಂಗಾಣ ರಾಜ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ದಿಲ್​ ರಾಜು ಕೂಡ ಉಪಸ್ಥಿತಿ ಇದ್ದರು.

ಹುಡುಗನ ಬಗ್ಗೆ ಅಲ್ಲು ಹೇಳಿದ್ದೇನು?

ಗಾಯಗೊಂಡಿರುವ ಶ್ರೀತೇಜ ಆಸ್ಪತ್ರೆಗೆ ದಾಖಲದಾಗಿನಿಂದ ಅವನ ಆರೋಗ್ಯ ಮತ್ತು ಅವನ ಬಗ್ಗೆ ತೀವ್ರ ಕಾಳಜಿ ಇದೆ ಎಂದು ಈ ಹಿಂದೆಯೇ ನಟ ಅಲಲ್ಲು ಅರ್ಜುನ್​ ಹೇಳಿದ್ದರು. ಅವನ ಆರೋಗ್ಯ ಸುಧಾರಿಸಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಅವರ ಕಟುಂಬವನ್ನು ಭೇಟಿ ಮಾಡಲಿದ್ದೇನೆ. ಆದರೆ, ಕಾನೂನು ಪ್ರಕ್ರಿಯೆಗಳಿಂದ ದೂರು ಇದ್ದೇನೆ ಎಂದಿದ್ದರು. ಇದೀಗ ಹುಡುಗನ್ನು ಭೇಟಿ ಆರೋಗ್ಯ ವಿಚಾರಿಸಿದ್ದಾರೆ.

2024ರ ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ಪ್ರೀಮಿಯರ್‌ನಲ್ಲಿ ನಟನನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಎಂಟು ವರ್ಷದ ಮಗನಿಗೆ(ಶ್ರೀತೇಜ) ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ನಟ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)