ನ್ಯೂಸ್

ರಾಗಿಣಿ, ಸಂಜನಾ ಸೇರಿ ಆರೂ ಮಂದಿ ಆರೋಪಿಗಳು ಮತ್ತೆ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಡ್ರಗ್ಸ್​ ಪ್ರಕರಣದ ಆರೋಪಿಗಳಾದ ನಟಿಯರಾದ ರಾಗಿಣಿ ಮತ್ತು ಸಂಜನಾ ಸೇರಿ ಆರು ಮಂದಿಯನ್ನೂ ಮತ್ತೆ ಮೂರು ದಿನ ಸಿಸಿಬಿ ಕಸ್ಟಡಿಗೆ ನೀಡಿ 1 ನೇ ಎಸಿಎಂಎಂ ಕೋರ್ಟ್​ ಆದೇಶ ನೀಡಿದೆ.

ಇಂದು ನ್ಯಾಯಾಧೀಶ ಜಗದೀಶ್​ ಅವರು ವಿಚಾರಣೆ ನಡೆಸಿದ್ದರು. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಮತ್ತೆ ತಮ್ಮ ವಶಕ್ಕೆ ನೀಡುವಂತೆ ಸಿಸಿಬಿ ಕೇಳಿತ್ತು. ಸಿಸಿಬಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸೆಪ್ಟೆಂಬರ್​ 14ನೇ ತಾರಿಖಿನವರೆಗೂ ರಾಗಿಣಿ, ಸಂಜನಾ, ರವಿಶಂಕರ್​, ನಿಯಾಜ್​, ಲೂಮ್​ ಪೆಪರ್​ ಅವರನ್ನು ಸಿಸಿಬಿ ಕಸ್ಟಡಿಗೆ ನೀಡಿದೆ.

ರಾಗಿಣಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಸಿಸಿಬಿ ವಶಕ್ಕೆ ನೀಡಬಾರದು ಎಂದು ಅವರ ಪರ ವಕೀಲರು ಮನವಿ ಮಾಡಿದ್ದರು.