ನ್ಯೂಸ್

'ಕಾಟೇರ' ಯಶಸ್ಸಿನ ಬಳಿಕ BMW ಕಾರು ಖರೀದಿಸಿದ ತರುಣ್ ಸುಧೀರ್

ಬೆಂಗಳೂರು: ಕಾಟೇರಾ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಟಿ ನಿರ್ದೇಶಕ ತರುಣ್ ಸುಧೀರ್ ಅವರು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ನಿರ್ದೇಶಕ ತರುಣ್ ಕಿಶೋರ್ ಅವರು ಬಿಎಂಡಬ್ಲ್ಯು ಎಕ್ಸ್1 ಕಾರನ್ನು ಖರೀದಿ ಮಾಡಿದ್ದಾರೆ.

ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಜನಪ್ರಿಯ ಬಿಎಂಡಬ್ಲ್ಯು ಎಕ್ಸ್1 ಕಾರನ್ನು ಖರೀದಿಸಿದ್ದಾರೆ. ತರುಣ್ ಅವರು ತಾಯಿ ಮಾಲತಿ ಸುಧೀರ್ ಜೊತೆ ತಮ್ಮ ಹೊಸ ಐಷಾರಾಮಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ.

ತರುಣ್ ಕಿಶೋರ್ ಅವರು ಖರೀದಿಸಿದ ಬಿಎಂಡಬ್ಲ್ಯು ಎಕ್ಸ್1 ಕಾರಿನ ಆನ್ ರೋಡ್ ಬೆಲೆಯು ರೂ.62,26,744 ಆಗಿದೆ. ತರುಣ್ ಕಿಶೋರ್ ಅವರು ಸ್ಯಾಂಡಲ್‌ವುಡ್‌ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ 'ಕಾಟೇರ' ಸಿನಿಮಾ ಭರ್ಜರಿ ಹಿಟ್ ಆಗಿದೆ. ತರುಣ್ ಅವರು ಮೊದಲ ನಿರ್ದೇಶನ ಮಾಡಿದ ಸಿನಿಮಾ 'ಚೌಕ' ಆಗಿದೆ. ತರುಣ್ ಸುಧಿರ್ ಅವರು ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ 'ಮಹಾನಟಿ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ತರುಣ್ ಕಿಶೋರ್ ಸುಧೀರ್ ಕಾಣಿಸಿಕೊಳ್ಳಲಿದ್ದಾರೆ.