ಬೆಂಗಳೂರು: ಯಾವುದೇ ಕೆಲಸ ಆರಂಭಿಸಲಿ ಪ್ರಥಮ ಪೂಜೆ ಗಣೇಶನಿಗೆ ಅರ್ಪಿತ. ಇಂತಹ ವಿಘ್ನ ನಿವಾರಕ ವಿನಾಯಕನಿಗೆ ಇಂದು ಚೌತಿ ಸಂಭ್ರಮ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆಯ ಮೂಲಕ ಒಳಿತಿಗಾಗಿ ಪ್ರಾರ್ಥಿಸುತ್ತೇವೆ. ಈ ಹಿನ್ನೆಲೆಯಲ್ಲಿ ಚಂದನವನದ ನಟಿಯರಾದ ‘ದೃಶ್ಯಂ’ ಖ್ಯಾತಿಯ ಆರೋಹಿ ನಾರಾಯಣ್, ‘ಜಲ್ಲಿಕಟ್ಟು’, ‘ಸದ್ದು’ ನಟಿ ನಿಖಿತಾ ಸ್ವಾಮಿ ಮತ್ತು ‘ಒಂದು ರಾಬರಿ ಕಥೆ’ಯ ರಿಶ್ವಿ ಭಟ್ ಈ ಬಾರಿಯ ಚೌತಿ ಸಂಭ್ರಮ ಆಚರಣೆಯ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ತಮಿಳಿಗೆ ಡೆಬ್ಯೂ ಆಗಿರುವುದೇ ವಿಶೇಷ
ಈ ವರ್ಷದ ಚೌತಿ ಆಚರಣೆ ವಿಶೇಷವಾಗಿರಲಿದೆ. ಕೈಯಲ್ಲಿ ಹಲವು ಅವಕಾಶಗಳಿವೆ ಹಾಗೆಯೇ ಮನೆಯಲ್ಲಿ ಎಲ್ಲರ ಆರೋಗ್ಯ ಸುಧಾರಣೆಯಾಗಿದೆ. ಹೀಗಾಗಿ ಈ ಬಾರಿ ಗಣೇಶನ ಆರಾಧನೆ ವಿಜೃಂಭಣೆಯಾಗಿರಲಿದೆ. ಅಪ್ಪ ರಿಗಾಲಿನಲ್ಲಿ ತೆರಳಿ, ಮನೆಗೆ ಗಣೇಶನ ವಿಗ್ರಹ ತರುತ್ತಿದ್ದರು. ಈ ವರ್ಷ ನಾನು, ನನ್ನ ತಂಗಿ ಅದೇ ಶಿಷ್ಟಾಚಾರ ಪಾಲಿಸುತ್ತೇವೆ. ಬಳಿಕ ಮನೆಯಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತೇವೆ. ಎಂದಿಗೂ ನನ್ನ ಪ್ರಥಮ ಭಕ್ತಿ ಗಣೇಶನಿಗೆ ಅರ್ಪಿತ. ನಾನು ಏನೇ ಕಾರ್ಯ ಆರಂಭಿಸಲಿ, ಮೊದಲು ಏಕದಂತನನ್ನು ನೆನೆಯುತ್ತೇನೆ. ಹಿಂದೆ ಬೀದಿಗಳಲ್ಲಿ, ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನನ್ನು ನೋಡಲೆಂದು ತೆರಳುತ್ತಿದ್ದೆವು. ಆದರೆ, ಇದು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಸದ್ಯ ಕನ್ನಡ-ತೆಲುಗಿನಲ್ಲಿ ನಾನು ನಟಿಸಿರುವ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಅದರಲ್ಲಿ ಬಿಜಿಯಾಗಿದ್ದೇನೆ. ತಮಿಳು ಚಿತ್ರರಂಗಕ್ಕೆ ಡೆಬ್ಯೂ ಆಗುತ್ತಿರುವುದು ಈ ಬಾರಿಯ ಗಣೇಶನ ಆಶೀರ್ವಾದ ಎಂದೇ ಭಾವಿಸುವೆ. -ಆರೋಹಿ ನಾರಾಯಣ್, ನಟಿ
ಹೊಸ ಪ್ರೊಡಕ್ಷನ್ ಹೌಸ್ ಆರಂಭ:
ಪ್ರತಿ ವರ್ಷದಂತೆ ಈ ಬಾರಿಯೂ ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುತ್ತೇವೆ. ನಮ್ಮ ಆಚರಣೆಯಲ್ಲಿ ವೈವಿಧ್ಯತೆಯಿದ್ದು, ಚೌತಿ ಹಬ್ಬದಂದು ನಾವು ನಾಗರಪೂಜೆ ಮಾಡುತ್ತೇವೆ. ಹಾಗಾಗಿ ಇಂದು ನೆಲಮಂಗಲದ ಾರ್ಮ್‌ಹೌಸ್‌ನಲ್ಲಿ ಹಬ್ಬ ಆಚರಿಸಲಿದ್ದೇವೆ. ಅಲ್ಲದೇ ಹಬ್ಬ ಕಳೆದ ಎರಡು ದಿನಗಳ ನಂತರ ನನ್ನದೇ ಸ್ವಂತ ಬ್ಯಾನರ್ ‘ಹೌಸ್ ಆ್ ಕಹಾನಿ’ ಎಂಬ ಪ್ರೊಡಕ್ಷನ್ ಹೌಸ್ ಆರಂಭಿಸುತ್ತಿದ್ದೇನೆ. ಇದು ನನ್ನ ಜೀವನದ ಕನಸಾಗಿತ್ತು. ಹಬ್ಬದಲ್ಲಿ ನನಸಾಗುತ್ತಿರುವುದು ಶುಭಸೂಚಕವಾಗಿದೆ. ಹೀಗಾಗಿ ಈ ಬಾರಿಯ ಗೌರಿ ಗಣೇಶ ಹಬ್ಬದ ಸಂಭ್ರಮ ಹೆಚ್ಚು ಎನ್ನಬಹುದು. ಇನ್ನು, ‘ಟಕೀಲಾ’, ‘ಸ್ಟ್ ನೈಟ್ ವಿಥ್ ದೆವ್ವ’ ಚಿತ್ರಗಳು ಬಿಡುಗಡೆ ಸಿದ್ಧವಾಗಿವೆ. ರಾಜ್ ಬಿ.ಶೆಟ್ಟಿ ನಟನೆಯ ‘ರಕ್ಕಸಪುರದೊಳ್’ದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಖುಷಿಯಿದೆ.
-ನಿಖಿತಾ ಸ್ವಾಮಿ, ನಟಿ
ಕುಟುಂಬದೊಂದಿಗೆ ಆಚರಣೆ:
ಕಳೆದ ವರ್ಷ ಶೂಟಿಂಗ್‌ನಲ್ಲಿ ಬಿಜಿಯಿದ್ದ ಕಾರಣ ಗೌರಿ ಗಣೇಶ ಹಬ್ಬದ ಆಚರಣೆ ಅಂದುಕೊಂಡಷ್ಟು ಗ್ರಾೃಂಡ್ ಆಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಎಷ್ಟೇ ಕೆಲಸಗಳಿದ್ದರೂ ಮನೆಯಲ್ಲಿ ಗೌರಿ-ಗಣೇಶ ಪ್ರತಿಷ್ಠಾಪಿಸಬೇಕು ಅಂತ ನಿರ್ಧರಿಸಿದ್ದೆ. ಅದರಂತೆ ನಮ್ಮ ಮನೆಯಲ್ಲಿ ಗೌರಿ-ಗಣೇಶ ಪ್ರತಿಷ್ಠಾಪಿಸುವ ಜತೆಗೆ ವಿಶೇಷ ವ್ರತ ಮಾಡುತ್ತೇವೆ. ಮುತ್ತೈದೆಯರಿಗೆ ಬಾಗಿನ ಅರ್ಪಿಸುತ್ತೇವೆ. ಈ ಹಬ್ಬ ನನಗೆ ಪಾಸಿಟಿವ್ ವೈಬ್ ನೀಡುತ್ತದೆ. ನಾನು ಯಾವ ಕೆಲಸ ಆರಂಭಿಸಿದರೂ ಮೊದಲು ನೆನೆಯುವುದು ಗಣಪನನ್ನು. ಸದ್ಯ ಒಂದು ಕಥೆ ಕೇಳಿದ್ದು, ಅದರ ಮಾತುಕತೆ ಹಂತದಲ್ಲಿದೆ.
-ರಿಶ್ವಿ ಭಟ್, ನಟಿ
ವಿನಾಯಕ ಇಷ್ಟದ ದೇವರು
ಮೊದಲಿನಿಂದಲೂ ಗಣೇಶ ದೇವರ ಮೇಲೆ ನನಗೆ ಎಲ್ಲಿಲ್ಲಿದ ಭಯ, ಭಕ್ತಿ. ಚಿಕ್ಕನಿಂದಲೂ ನನಗೆ ಇಷ್ಟವಾಗುವ ದೇವರು ಕೂಡ. ನನ್ನ ಬದುಕಿನಲ್ಲಿ ಪ್ರತಿನಿತ್ಯ ಗಣೇಶನನ್ನು ಶ್ಲೋಕದ ಮೂಲಕ ನೆನೆಯುತ್ತೇನೆ. ಪ್ರತೀ ಗಣೇಶ ಚೌತಿಯನ್ನು ನಾನು ಸಂಭ್ರಮದಿಂದ ಆಚರಿಸುತ್ತೇನೆ. ನಮ್ಮ ಮನೆಯಲ್ಲಿ ದೇವರನ್ನು ಕೂರಿಸುವುದಿಲ್ಲ. ನಮ್ಮ ಸಂಬಂಧಿಕರ ಮನೆಯಲ್ಲಿ ಕೂರಿಸುತ್ತಾರೆ. ಅವರ ಮನೆಗೆ ಕುಟುಂಬ ಸಮೇತರಾಗಿ ತೆರಳಿ ದರ್ಶನ ಪಡೆಯುತ್ತೇವೆ. ಅಲ್ಲದೇ, ಬೀದಿಗಳಲ್ಲಿ, ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವಲ್ಲಿ ಭೇಟಿ ನೀಡುತ್ತೇವೆ. ಸದ್ಯ ನಾನು ‘ಅಮರ ಪ್ರೇಮಿ ಅರುಣ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಒಂದು ಪ್ರಮುಖವಾದ ಸ್ಟೋರಿ ಕೇಳಿದ್ದೇನೆ. ಅದರ ಬಗ್ಗೆ ಸದ್ಯದಲ್ಲಿ ಮಾಹಿತಿ ನೀಡಲಿದ್ದೇನೆ. ಈ ಎರಡು ಪ್ರೊಜೆಕ್ಟ್‌ಗಳ ಪ್ರಗತಿ ಗಣೇಶ ಚೌತಿಯಂದು ಆಗುತ್ತಿರುವುದಕ್ಕೆ ಖುಷಿಯಿದೆ.
- ದೀಪಿಕಾ ಆರಾಧ್ಯ, ನಟಿ