ಬೆಂಗಳೂರು: ಸ್ಯಾಂಡಲ್ವುಡ್ ನಟ ದೊಡ್ಮನೆ ಮಗ ಗುರು ರಾಜ್‌ಕುಮಾರ್ @ ಯುವ ರಾಜ್‌ಕುಮಾರ್ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಸ್ಯಾಂಡಲ್ವುಡ್ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ಬೆಳಕಿಗೆ ಬಂದಿದೆ. ಕಳೆದ ಜೂನ್ 6ರಂದು ದೊಡ್ಮನೆ ಮಗ ಯುವ ರಾಜ್‌ಕುಮಾರ್ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
MC ಌಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯುವರಾಜ್ ಕುಮಾರ್ ಅರ್ಜಿಯ ಹಿನ್ನೆಲೆಯಲ್ಲಿ ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್‌ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ.
2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಯುವರಾಜ್ ಕುಮಾರ್ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್ ಕೊಟ್ಟಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿ ಶ್ರೀದೇವಿ ನೆಲೆಸಿದ್ದಾರೆ. ಶಾಂತಿನಗರ ಫ್ಯಾಮಿಲಿ ಕೋರ್ಟ್‌ನಲ್ಲಿ ಇದೇ ತಿಂಗಳು 6ನೇ ತಾರೀಕು ವಿಚ್ಛೇದನ ಅರ್ಜಿ ಸಲ್ಲಿಸಿದ್ದರು ಯುವರಾಜ್.
ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್ ಪುನೀತ್ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.