ನ್ಯೂಸ್

​ಮದುವೆ ಆಗಿದ್ಯಾ? ಹೆಂಡ್ತಿ ಯಾರು? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟೆ ಬಿಟ್ರು ವಿನೋದ್ ರಾಜ್

ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​​ನಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದವರು ನಟ ವಿನೋದ್​ ರಾಜ್. ಇವರ ತಾಯಿ ಹಿರಿಯ ನಟಿ ಲೀಲಾವತಿ ಸದ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಗ ನಟ ವಿನೋದ್ ರಾಜ್​ ಕುಮಾರ್ ತಾಯಿ ಆರೈಕೆ ಮಾಡುತ್ತಿದ್ದಾರೆ. ಲೀಲಾವತಿ ಮದುವೆ ವಿಚಾರ ಅನೇಕ ಬಾರಿ ಸುದ್ದಿಯಾಗಿತ್ತು. ಹಾಗೆ ಇವರ ಮಗ ನಟ ವಿನೋದ್​ ರಾಜ್​ ಅವರಿಗೂ ಮದುವೆ ಆಗಿದ್ದು, ಓರ್ವ ಮಗನಿದ್ದಾನೆ ಎನ್ನುವ ಸುದ್ದಿಯಾಗಿತ್ತು. ಈ ಕುರಿತಾಗಿ ವಿನೋದ್​ ರಾಜ್​ ಅವರು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ಜತೆ ಮಾತನಾಡಿದ ವಿನೋದ್​ ರಾಜ್​ ಅವರು, ಮದುವೆ..ಪತ್ನಿ.. ಮಕ್ಕಳಿಗಿಂತ ಹೆಚ್ಚಾಗಿ ನನ್ನ ಯೋಚನೆ ಇದ್ದದ್ದು ನನ್ನ ತಾಯಿ ಕುರಿತಾಗಿ. ನಾನು ಯಾರನ್ನು ಬೀದಿಗೆ ಬಿಟ್ಟಿಲ್ಲ. ಈ ಪ್ರಶ್ನೆ ಕೇಳುವ ನಿಮಗೆ ಎನ್​ ಕಷ್ಟವಾಗುತ್ತಿದೆ?. ಏನು ಮಾಡದೇ ಇರುವ ನನಗೆ ಇಷ್ಟೊಂದು ಉಗಿತಾ ಇದ್ದೀರಾ? ನಾನು ಎನ್​ ಆದರೂ ಎಲ್ಲರನ್ನು ಬಿಟ್ಟಿದ್ದರೆ ಸುಮ್ಮನೆ ಬಿಡ್ತಾ ಇದ್ದರಾ ನನ್ನ? ತಂದೂರಿ ಮಾಡ್ತಾ ಇದ್ದೀರಿ ಎಂದು ಉತ್ತರಿಸಿದ್ದಾರೆ.

ನನಗೂ ಪ್ರಾಮಾಣಿಕತೆ ಇದೆ. ನನ್ನ ಕೊನೆ ಉಸಿರು ಇರುವವರೆಗೂ ನಾನು ಹೀಗೆ ಪ್ರಾಮಾಣಿಕನಾಗಿ ಇರುತ್ತೇನೆ. ನನ್ನ ರಕ್ತ ಯಾವುದು? ನನ್ನ ಡಿಎನ್​​ಎ ಯಾವುದು ಅಂತಾ ಕೇಳಿ? ಬಯಲಿಗೆ ಎಳೆಯುವ ಕೆಲಸ ಮಾಡ್ತೀರಾ? ಇಂತಹ ವಿಕೃತ ಮನೋಭಾವ ಇರುವವರಿ ಪ್ರೋತ್ಸಾಹ ನೀಡ ಬೇಡಿ ಎಂದು ಬೇಸರದಿಂದ ಹೇಳಿದ್ದಾರೆ.

ನಮ್ಮ ತಾಯಿ ಅವರು ಹೇಳಿಕೊಟ್ಟಿರುವ ಪಾಠ.. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ... ಬಸವಣ್ಣ ಅವರು ಹೇಳಿದ್ದು ಯಾವತ್ತು ಸುಳ್ಳಾಗಲ್ಲ. ನಮ್ಮ ತಾಯಿ ಹೇಳಿರುವ ಬುದ್ಧಿ ಯಾವತ್ತು ವ್ಯರ್ಥವಾಗಲ್ಲ.. ಅಪಾರವಾದ ಅರ್ಥ ಇದೆ. ಎಂದು ತಮ್ಮ ತಾಯಿ ಹೇಳಿ ಕೊಟ್ಟಿರುವ ಪಾಠವನ್ನು ಕೊನೆ ಉಸಿರು ಇರುವವರೆಗೂ ಅದೇ ಪಾಠವನ್ನು ಅನುಸರಿಸುತ್ತೇನೆಂದು ಹೇಳಿದ್ದಾರೆ.

ಚಂದನವನದಲ್ಲಿ ಚೆಂದದ ನಾಯಕಿಯಾಗಿ ಮಿಂಚಿದ ಲೀಲಾವತಿ ಅವರ ಬಗ್ಗೆ ಇಂದಿಗೂ ಗಾಂಧಿನಗರದಲ್ಲಿ ಗಾಸಿಪ್​ಗಳು ಹರಡುತ್ತಲೇ ಇರುತ್ತದೆ. ಹಿರಿಯ ನಟಿ ಲೀಲಾವತಿ ಸದ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಗ ನಟ ವಿನೋದ್ ರಾಜ್​ ಕುಮಾರ್  ತಾಯಿ ಆರೈಕೆ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಡಾನ್ಸ್​ಗೆ ಹೆಸರುವಾಸಿಯಾಗಿದ್ದ ವಿನೋದ್​ ರಾಜ್​ ಕಾರಣಾಂತರಗಳಿಂದ ಸಿನಿಮಾ ರಂಗದಿಂದ ದೂರ ಸರಿದು ತಮ್ಮ ತಾಯಿ ಲೀಲಾವತಿ ಅವರ ಜೊತೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ತೋಟ ನೋಡಿಕೊಂಡು ರೈತನಾಗಿ ನೆಮ್ಮದಿಯುತ ಜೀವನ ನಡೆಸುತ್ತಿದ್ದಾರೆ.

ಈ ಸುದ್ದಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…