ಮರಳು ಬೆಕ್ಕು ಒಂದು ಸಣ್ಣ ಕಾಡು ಬೆಕ್ಕು. ಇದು ನೀರಿನ ಮೂಲಗಳಿಂದ ದೂರವಿರುವ ಮರಳು ಮತ್ತು ಕಲ್ಲಿನ ಮರುಭೂಮಿಗಳಲ್ಲಿ ವಾಸಿಸುತ್ತದೆ. ಮರಳಿನಿಂದ ತಿಳಿ ಬೂದು ಬಣ್ಣ ಇವುಗಳದಾಗಿದ್ದೆ. ಮರಳು ಬೆಕ್ಕು ತುಂಬಾ ಅಪರೂಪದ ಜೀವಿಗಳಾಗಿದ್ದು ಮೊಟ್ಟ ಮೊದಲು ಇದು ಕಂಡು ಬಂದಿದ್ದು, ದಕ್ಷಿಣ ಆಫ್ರಿಕಾದ ಅಲ್ಜೇರಿಯಾದಲ್ಲಿ. ಮರಳು ಬೆಕ್ಕು ಸಾಮಾನ್ಯವಾಗಿ ಹಗಲಿನಲ್ಲಿ ಗುಹೆಗಳಲ್ಲಿ ವಿಶ್ರಾಂತಿ ಪಡೆಯುತ್ತದೆ ಮತ್ತು ರಾತ್ರಿಯಲ್ಲಿ ಬೇಟೆಯಾಡುತ್ತದೆ. ಇದೀಗ ಅಪರೂಪದ ಈ ಮರಳು ಬೆಕ್ಕು ಹಿಂಡಾಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಬೇಟೆಗಾಗಿ ರಾತ್ರಿ ವೇಳೆ 5.4 ಕಿಮೀ ನಷ್ಟು ದೂರ ಚಲಿಸುತ್ತವೆ
ರಾತ್ರಿ ಆಗುತ್ತಿದ್ದಂತೆಯೇ ತನ್ನ ಬೇಟೆಯನ್ನ ಹುಡುಕಿಕೊಂಡು ಚಲಿಸುವ ಮರಳು ಬೆಕ್ಕು ಸುಮಾರು 5.4 ಕಿಮೀ ದೂರ ಚಲಿಸುತ್ತವೆ. ಇದು ವಿಷಪೂರಿತಯ ಹಾವುಗಳನ್ನ ಸಹ ಕೊಂದು ತಿನ್ನುತ್ತವೆ. 1970 ರ ದಶಕದ ಆರಂಭದಲ್ಲಿ, ನೈಋತ್ಯ ಪಾಕಿಸ್ತಾನದಲ್ಲಿ ಮರಳು ಬೆಕ್ಕುಗಳನ್ನು ಹಿಡಿದು ಪ್ರಪಂಚದಾದ್ಯಂತ ಪ್ರಾಣಿಸಂಗ್ರಹಾಲಯಗಳಿಗೆ ರಫ್ತು ಮಾಡಲಾಯಿತು. ಇದೀಗ ಈ ಮರಳು ಬೆಕ್ಕಿನ ವಿಡಿಯೋವನ್ನ ನ್ಯಾಶನಲ್ ಜಿಯೋಗ್ರಫಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪುಟ್ಟ ಬೆಕ್ಕಿನ ಮುದ್ದಾದ ನೋಟಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ಆಫ್ರಿಕಾದಲ್ಲಿ ಕಂಡು ಬಂದ ದೃಶ್ಯ
ಗ್ಲೋಬಲ್ ವೈಲ್ಡ್ ಕ್ಯಾಟ್ ಪ್ಯಾಂತೇರಾ ಗ್ರೂಪ್ಸ್ನ ತಂಡವು ಆಫ್ರಿಕಾದ ಮೊರಾಕೋ ಸಹಾರಾ ಮರುಭೂಮಿಯಲ್ಲಿ ಈ ದೃಶ್ಯಗಳನ್ನ ಸೆರೆ ಹಿಡಿದಿದ್ದಾರೆ, ಹುಲ್ಲಿನ ರಾಶಿಯಿಂದ ಹೊರಬಂದ ಬೆಕ್ಕು ಪಿಳಿ-ಪಿಳಿಯಾಗಿ ನೋಡುತ್ತಿದ್ದೆ. ಹೀಗೆ ನೋಡುತ್ತಿರುವ ಬೆಕ್ಕು ಒಂದೆಡೆಯಾದ್ರೆ ಮತ್ತೆರಡು ಬೆಕ್ಕು ಹುಲ್ಲಿನ ಪೊದೆಯಿಂದಲೇ ಎಲ್ಲವನ್ನ ವೀಕ್ಷಿಸುತ್ತಿದೆ. ಇನ್ನು ಇದೇ ಮೊದಲ ಬಾರಿ ಮರಳು ಬೆಕ್ಕಿನ ವಿಡಿಯೋವನ್ನ ಸೆರೆಹಿಡಿಯಲು ಅವಕಾಶ ದೊರಕಿದೆ ಎಂದು ಅಫ್ರಿಕಾದ ವೈಲ್ಡ್ ಕ್ಯಾಟ್ ರಿಸರ್ಚ್ ಟೀಮ್ ಮಾಹಿತಿ ನೀಡಿದೆ.