ನ್ಯೂಸ್

video/ ಮರಳು ಕಲಾವಿದನ ಕೈಯಲ್ಲಿ ಅರಳಿತು ಶ್ರೀರಾಮ ಮಂದಿರ

arunakunigal

ಧಾರವಾಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಮರಳು ಕಲಾವಿದರೊಬ್ಬರು 20 ಟನ್ ಮರಳಿನಲ್ಲಿ ರಾಮ ಮಂದಿರ ನಿರ್ಮಿಸಿ ರಾಮಭಕ್ತಿ ಸಮರ್ಪಿಸಿದ್ದಾರೆ.

‘ಅಯೋಧ್ಯೆ ರಾಮ ಮಂದಿರಕ್ಕೆ‌ ಭೂಮಿ ಪೂಜೆ ಹಿನ್ನೆಲೆಯಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಧಾರವಾಡದ ದೊಡ್ಡನಾಯಕನಕೊಪ್ಪ ಬಸ್ ನಿಲ್ದಾಣದ ಸಮೀಪ ಮರಳಿನಲ್ಲಿ‌ ರಾಮ ಮಂದಿರ ನಿರ್ಮಿಸಿದ್ದಾರೆ.

ಮರಳಿನಲ್ಲಿ ರೂಪ ಪಡೆದ ರಾಮ ಮಂದಿರವನ್ನು ಸಾವಿರಾರು ಜನರು ಕಣ್ತುಂಬಿಕೊಂಡಿದ್ದಾರೆ. 6 ಅಡಿ ಎತ್ತರ, 10 ಅಡಿ ಅಂಗುಲದ ಈ ಮರಳು ಕಲೆಯನ್ನು ನೋಡಲು ಜನ ಬರುತ್ತಿದ್ದು, ಮರಳು ಕಲೆಯಲ್ಲಿ ರಾಮಭಕ್ತಿ ಸಮರ್ಪಿಸಿದ ಕಲಾವಿದನಿಗೂ ನಮಸ್ಕರಿಸಿದ್ದಾರೆ. ಮಹಿಳೆಯರು ಮರಳಿನಲ್ಲಿ ಮೂಡಿದ ರಾಮ ಮಂದಿರಕ್ಕೆ ಆರತಿ ಪೂಜೆ ಸಲ್ಲಿಸುವ ಮೂಲಕ ರಾಮನಾಮ ಜಪಿಸಿದರು.