ನ್ಯೂಸ್

ಸನಾತನ ಧರ್ಮ ಏಡ್ಸ್ ಕುಷ್ಠ ಇದ್ದಂತೆ ಎಂದ ಅರ್ಜುನ ಭದ್ರೆ

ಬಾಬುರಾವ ಯಡ್ರಾಮಿ

ಸಚಿವ ಉದಯನಿಧಿ ಪ್ರಿಯಾಂಕ್ ಹೇಳಿಕೆಗೆ ದಸಂಸ ಬೆಂಬಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಗೆ ಬೆಂಬಲಿಸುತ್ತೇವೆ. ಅವರು ಹೇಳಿದ್ದು ಸರಿಯಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಸಂಚಾಲಕ ಅರ್ಜುನ ಭದ್ರೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸನಾತನ ಶತಮಾನಗಳಿಂದ ನಡೆಯುತ್ತಿರುವ ಜಾತಿ ವ್ಯವಸ್ಥೆ ಪರವಾಗಿದೆ. ಅದನ್ನು ವಿರೋಧಿಸುವ ಸಂವಿಧಾನ ಗೌರವಿಸುವ ಹೇಳಿಕೆ ನೀಡಿದ್ದರಲ್ಲಿ ತಪ್ಪೇನಿಲ್ಲ. ಅವರೊಂದಿಗೆ ನಾವಿರುತ್ತೇವೆ ಎಂದರು.
ಸನಾತನ ಧರ್ಮವನ್ನು ತಮಿಳುನಾಡು ಸಚಿವ ಉದಯನಿಧಿ ಅವರು ಡೆಂಘೆ, ಮಲೇರಿಯಾಕ್ಕೆ ಹೋಲಿಸಿದ್ದಾರೆ. ಆದರೆ, ಅವರೆಡು ರೋಗಗಳು ಸಾಮಾಜಿಕ ಪಿಡುಗು ಅಲ್ಲ.  ಅದಕ್ಕೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಸನಾತನ ಎಂದರೆ ಏಡ್ಸ್, ಕುಷ್ಠ ರೋಗ  ಇದ್ದಂತೆ ಎಂದು ಜರಿದರು.
ಸನಾತನ ಎಂದರೆ ಪುರಾತನವಾದದ್ದು. ಆದರೆ, ಅದನ್ನು ಹಿಂದು ಧರ್ಮಕ್ಕೆ ಹೋಲಿಸಿಕೊಂಡು ಇಲ್ಲದ್ದನ್ನು ಮಾಡುತ್ತಿರುವ ಕೋಮುವಾದಿಗಳ ನಡೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಸನಾತನವಾದಿಗಳು  ಅಮಾನವೀಯವ, ಅಸಮಾನತೆ, ಅನ್ಯಾಯ, ಶೋಷಣೆ ಜನಾಂಗೀಯತೆ, ಜಾತಿ, ಅಸ್ಪÊಶ್ಯತೆ ಬೆಂಬಲಿಸುವAತದ್ದಾಗಿದೆ  ಎಂದು ಭದ್ರೆ ಹೇಳಿದರು.
ಇಂತಹ ಅನಿಷ್ಠಗಳನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವಾಗ ಈ ಸನಾತನಿಗಳು ಇಲ್ಲದ್ದನ್ನು ಹೇಳಿಕೊಂಡು ಬರುತ್ತಿದ್ದಾರೆ. ಇನ್ನೂ  ಆರ್‌ಎಸ್‌ಎಸ್ ಮತ್ತು ಬಿಜೆಪಿಯವರಿಗೆ  ಏನು ಕೆಲಸವಿಲ್ಲ. ಇಂತಹ ವಿಷಯ ಮುಂದಿಟ್ಟುಕೊAಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಲ್ಲದ ಹೇಳಿಕೆ ನೀಡಿ ಪ್ರಚೋಧಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರ ರೀತಿಯಲ್ಲಿಯೇ ನಾವು ಸಹ ಉತ್ತರ ನೀಡಲು ಆರಂಭಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಬಹುಸಂಖ್ಯಾತ ಮೂಲ ನಿವಾಸಿಗಳ ಆಶಯಕ್ಕೆ ಧಕ್ಕೆ ತರುವಂತ ಕೆಲಸ ಸಹಿಸುವುದಿಲ್ಲ ಎಂದು ಭದ್ರೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಶಂಡರಾದ ಮಹೇಶ ಕೋಕಿಲ್, ಮಲ್ಲಿಕಾರ್ಜುನ ಖನ್ನಾ, ಮಹಾಂತೇಶ ಬಡದಾಳ, ಸೂರ್ಯಕಾಂತ ಆಜಾದಪುರ, ಶಿವಕುಮಾರ ಕೊರಳ್ಳಿ, ಕಪಿಲ್ ಸಿಂಗೆ, ರಾಜಕುಮಾರ ನಿಂಬಾಳ ಮೊದಲಾದವರಿದ್ದರು.