ಹೈದರಾಬಾದ್: ( 'Same same but different' ) ನಟಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಹೈದರಾಬಾದ್‌ನಲ್ಲಿ ದೀಪಾವಳಿ ಆಚರಿಸುತ್ತಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಧ್ಯೆ, ನಟ ವಿಜಯ್ ದೇವರಕೊಂಡ ಕೂಡ ದೀಪಾವಳಿಯಂದು ತಮ್ಮ ಕುಟುಂಬದೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಬ್ಬರು ಒಟ್ಟಿಗೆ ಹಬ್ಬ ಸೆಲೆಬ್ರೆಟ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ 2 ಚಿತ್ರದಲ್ಲಿ ನಟಿಸಿದ್ದಾರೆ. 2018ರ ಗೀತಾ ಗೋವಿಂದಂ ಹಾಗೂ 2019ರಲ್ಲಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಕೊಂಡ ಕುಟುಂಬದ ಜೊತೆಗೆ ರಶ್ಮಿಕಾ ಮಂದಣ್ಣ ಆತ್ಮೀಯರಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ನಡುವೆ ಡೇಟಿಂಗ್ ಕುರಿತು ಗಾಸಿಪ್ ಹಲವು ಬಾರಿ ಹರಿದಾಡಿದೆ. ವಿಜಯ್ ದೇವರಕೊಂಡ ಹಾಗೂ ದೇವರಕೊಂಡ ಕುಟುಂಬದ ಜೊತೆ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಬಳಿಕ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಭಾರಿ ಸದ್ದು ಮಾಡುತ್ತಿದೆ.
ರಶ್ಮೀಕಾ ಮಂದಣ ದೀಪ ಬೆಳಗಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಇಷ್ಟೇ ಅಲ್ಲ ದೀಪಾವಳಿ ಫೋಟೋಶೂಟ್ ಮುಗಿದಿದೆ. ಇಷ್ಟೇ ಅಲ್ಲ ಫೋಟೋ ಕ್ರಿಕೆಟ್‌ನ್ನು ದೇವರಕೊಂಡ ಸಹೋದರ ಆನಂದ್ ದೇವರಕೊಂಡಾಗೆ ನೀಡಿದ್ದಾರೆ. ಥ್ಯಾಂಕ್ಯೂ ಆನಂದ ಎಂದು ಬರೆದುಕೊಂಡಿದ್ದರು. ಈ ಮೂಲಕ ರಶ್ಮಿಕಾ ಮಂದಣ್ಣ ತಮ್ಮ ದೀಪಾವಳಿ ಹಬ್ಬ ದೇವರಕೊಂಡ ಮನೆಯಲ್ಲಿ ಆಚರಿಸಿದ್ದಾರೆ ಅನ್ನೋ ಸುಳಿವು ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಈ ಸುಳಿವು ನೀಡುತ್ತಿದ್ದಂತೆ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಯಾಗಿತ್ತು. ದೇವರಕೊಂಡ ಮನೆಯಲ್ಲಿ ರಶ್ಮಿಕಾ ದೀಪಾವಳಿ ಆಚರಣೆ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಫೋಟೋ ಕ್ರಿಕೆಟ್ ಹಾಗೂ ಥ್ಯಾಂಕ್ಯೂ ಆನಂದ ಅನ್ನೋ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ. ಆದರೆ ಫೋಟೋಗಳನ್ನು ಉಳಿಸಿಕೊಂಡಿದ್ದಾರೆ.
ಇತ್ತ ವಿಜಯ್ ದೇವರಕೊಂಡ ಕೂಡ ದೀಪಾವಳಿ ಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಶ್ಮೀಕಾ ಹಾಗೂ ದೇವರಕೊಂಡ ಫೋಟೋಗಳನ್ನು ಕೆಲ ಹೋಲಿಕೆಗಳನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ದೇವರಕೊಂಡ ಕುಟುಂಬ ಜೊತೆ ದೀಪಾವಳಿ ಹಬ್ಬ ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.