ಬಹುಭಾಷಾ ನಟಿ ಸಮಂತಾ ರುತ್ ಪ್ರಭು 
ನ್ಯೂಸ್

ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಪ್ರೆಗ್ನೆನ್ಸಿ ಫೋಟೋಶೂಟ್ ವೈರಲ್: ಗರ್ಭಾವಸ್ಥೆಯ 9ನೇ ತಿಂಗಳಲ್ಲೂ ಜಿಮ್‌ ಹುಚ್ಚು | Samantha pregnancy

Samantha Maternity photoshoot: ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸದ್ಯ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಸದ್ಯ ಪ್ರೆಗ್ನೆನ್ಸಿಯ 9ನೇ ತಿಂಗಳಲ್ಲಿರುವ ನಟಿ, ತಮ್ಮ ಗರ್ಭಾವಸ್ಥೆಯ ಸುಂದರ ಕ್ಷಣಗಳ ಜತೆಗೆ ಫಿಟ್‌ನೆಸ್ ಜರ್ನಿಯ ಜಲಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇಂದಿನ ದಿನಗಳಲ್ಲಿ ಗರ್ಭಾವಸ್ಥೆಯ ಫೋಟೋಶೂಟ್ ಅಂದ್ರೆ ದೇಹ ಪ್ರದರ್ಶನವೇ ಹೆಚ್ಚಾಗಿದೆ. ಹೊಟ್ಟೆಯ ಮೇಲೆ ಪೇಂಟಿಂಗ್ ಮಾಡಿಸಿ ಫೋಟೋ ಶೇರ್ ಮಾಡುವ ಟ್ರೆಂಡ್ ನಡುವೆ, ಸಮಂತಾ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಯಾವುದೇ ಅತಿರೇಕವಿಲ್ಲದೆ, ಮಾತೃತ್ವದ ಖುಷಿಯನ್ನು ಅತ್ಯಂತ ಸೌಂದರ್ಯವಾಗಿ ಮತ್ತು ಸಾಂಪ್ರದಾಯಿಕ ಸಭ್ಯತೆಯಲ್ಲಿ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸರಳ ವಿವಾಹ

ನಟಿ ಸಮಂತಾ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 2025ರಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಾಲಯದಲ್ಲಿ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೇ ಇಶಾ ಫೌಂಡೇಶನ್‌ನಲ್ಲಿ ಇವರ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವೂ ನೆರವೇರಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡ ಬಂದ ಪತಿ ಹತ್ಯೆ: ಹಾರ್ಟ್ ಅಟ್ಯಾಕ್ ನಾಟಕವಾಡಿದ್ದ ಹೆಂಡತಿ, ಪ್ರಿಯಕರ ಅರೆಸ್ಟ್! | Husband Murder

‘ಪ್ರೆಗ್ನೆನ್ಸಿ ಆರಂಭದಿಂದಲೂ ಫಿಟ್‌ನೆಸ್ ವಿಡಿಯೋ ಹಂಚಿಕೊಳ್ಳುತ್ತಿರುವ ಸಮಂತಾ, 'ಈಗ ದೇಹಕ್ಕೆ ಕಷ್ಟ ಕೊಟ್ಟು ವರ್ಕ್‌ಔಟ್ ಮಾಡಲ್ಲ, ಅದರ ಸಾಮರ್ಥ್ಯಕ್ಕೆ ತಕ್ಕಂತೆ ಹೆಜ್ಜೆ ಇಡುತ್ತೇನೆ' ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಅವರ ಈ ಫಿಟ್‌ನೆಸ್ ಜರ್ನಿ ಮತ್ತು ಸಭ್ಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ