ಆಂಧ್ರಪ್ರದೇಶ: ಟಾಲಿವುಡ್ನ ಕ್ಯೂಟ್ ನಟಿ ಎಂದೇ ಖ್ಯಾತಿ ಪಡೆದಿರುವ ಸಮಂತಾ ರುತ್ ಪ್ರಭು ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದು ಮಾತುಗಳು, ಪ್ರವಾಸಗಳಿಂದಲೇ ಅನೇಕರ ಗಮನ ಸೆಳೆಯುತ್ತಿದ್ದಾರೆ. ಇದೀಗ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ನಟಿ ಇಟಲಿಯನ್ನು ಅನ್ವೇಷಣೆ ಮಾಡುವಲ್ಲಿ ನಿರತರಾಗಿದ್ದಾರೆ.
ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಜತೆ ನಟಿಸಿದ ಪ್ಯಾನ್ ಇಂಡಿಯಾ ಚಿತ್ರ 'ಖುಷಿ' ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಸದ್ಯ ಈ ಸಿನಿಮಾದ ಬಳಿಕ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಸಮಂತಾ ಇದೀಗ ವಿದೇಶ ಪ್ರಯಾಣ ಬೆಳೆಸಿದ್ದು, ತಮ್ಮ ಬಕೆಟ್ ಲಿಸ್ಟ್ ಪ್ರಯಾಣದ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಅಭಿಮಾನಿಗಳಿಗೆ ಮತ್ತು ಸೋಷಿಯಲ್ ಮೀಡಿಯಾ ಅನುಯಾಯಿಗಳಿಗೆ ತಾವು ಹೋದ ಹೊಸ ಸ್ಥಳಗಳಲ್ಲಿ ಏನು ವಿಶೇಷತೆ, ತಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಸುಳಿವು ನೀಡುವ ನಟಿ, ಇದೀಗ ಇಟಲಿಯಲ್ಲಿ ಐಸ್ ಕ್ರೀಂ ಸವಿಯಲು ಇತರರೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ಹಾಸ್ಯಮಯವಾಗಿ ಶೀರ್ಷಿಕೆ ಕೊಟ್ಟು ತಮ್ಮ ಸ್ಟೋರಿಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ಮೇಲೆ 'ಯಾರು ಕಾಯುತ್ತಾರೋ ಅವರಿಗೆ ಒಳ್ಳೆಯದು ಲಭಿಸುತ್ತದೆ' ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಸ್ಟೋರಿ ನೋಡಿ ಅಭಿಮಾನಿಗಳು ನಟಿ ಇಟಲಿಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ 'ಖುಷಿ' ನಂತರ ಸಮಂತಾ ಕೆಲವು ಸ್ಟಾರ್ ನಟರ ಮುಂಬರುವ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).