ನ್ಯೂಸ್

ಸ್ವೀಡನ್​ನಲ್ಲಿ ಕುರಾನ್ ಸುಟ್ಟು ಹಾಕಿದ ಕುಖ್ಯಾತಿ ಹೊಂದಿದ್ದ ಸಲ್ವಾನ್​ ಗುಂಡೇಟಿಗೆ ಬಲಿ! | Salwan

ಸ್ವೀಡನ್​ನಲ್ಲಿ ಕುರಾನ್​​ ಸುಟ್ಟು ಹಾಕಿದ ಕುಖ್ಯಾತಿ ಹೊಂದಿದ್ದ ಇರಾಕ್​ ನಿರಾಶ್ರಿತನಾಗಿದ್ದ ಸಲ್ವಾನ್​(Salwan) ಮೊಮಿಕಾ(38) ಎಂಬ ವ್ಯಕ್ತಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಗುರುವಾರ ವರದಿಯಾಗಿದೆ.

ಬುಧವಾರ ತಡರಾತ್ರಿ ಸ್ವೀಡನ್​ನ ಸೋಡೆಲಾರ್ಜ್​ನ ಅವರ ಮನೆಯಲ್ಲಿ ಮೃತದೇಹ ಪತ್ತೆಯಾದ ಬಳಿಕ ಗುಂಡೇಟಿನ ಬಗ್ಗೆ ಮಾಹಿತಿ ಹೊರ ಬಿದ್ದಿದಿದೆ.

2023ರಲ್ಲಿ ಸ್ವೀಡನ್​ನಲ್ಲಿ ಇಸ್ಲಾಂ ಪವಿತ್ರಗ್ರಂಥವಾದ ಕುರಾನ್​ ಅನ್ನು ಸುಟ್ಟು ಹಾಕಿದ್ದ ಈ ಸಲ್ವಾನ್​ ಮೊಮಿಕಾ, ಇದರಿಂದ ಸ್ವೀಡನ್​ ಮಾತ್ರವಲ್ಲದೆ, ವಿಶ್ವಾದ್ಯಾಂತ ಮುಸ್ಲಿಂ ರಾಷ್ಟ್ರಗಳು ಇತನ ಕೃತ್ಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದವು. ಈ ಕೃತ್ಯದಿಂದ ಇತನು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದ. ಇದೀಗ ಇತನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಸಲ್ವಾನ್ ಮೊಮಿಕಾ ಯಾರು?

38 ವರ್ಷದ ಸಲ್ವಾನ್ ಮೊಮಿಕಾ ಇರಾಕ್‌ ಮೂಲದ ನಿರಾಶ್ರಿತನಾಗಿದ್ದು, ಸ್ವೀಡನ್‌ನಲ್ಲಿ ಹಲವಾರು ಬಾರಿ ಇಸ್ಲಾಂನ ಪವಿತ್ರ ಗ್ರಂಥವನ್ನು ಸುಟ್ಟುಹಾಕಿ ಅಪವಿತ್ರಗೊಳಿಸಿದ ಆರೋಪ ಇತನ ಮೇಲಿದೆ. ಇದಾದ ನಂತರ ಜನಾಂಗೀಯ ಸಮುದಾಯಗಳ ವಿರುದ್ಧ ಪ್ರಚೋದನೆ ಮಾಡಿದ ಆರೋಪದ ಮೇಲೆ ಸ್ವೀಡಿಷ್ ಅಧಿಕಾರಿಗಳಿಂದ ಸಲ್ವಾನ್ ಮೊಮಿಕಾ ತನಿಖೆಗೆ ಒಳಗಾಗಿದ್ದ. ಅಲ್ಲದೆ, ತನ್ನ ಪ್ರತಿಭಟನೆಗಳು ಇಸ್ಲಾಂ ವಿರುದ್ಧವೆ ಹೊರತು ಮುಸ್ಲಿಂರ ವಿರುದ್ಧ ಅಲ್ಲ. ಕುರಾನ್​ನಲ್ಲಿರುವ ಸಂದೇಶಗಳಿಂದ ಸ್ವೀಡನ್​ನಲ್ಲಿರುವ ಜನರನ್ನು ರಕ್ಷಿಸಿವುದೆ ನನ್ನ ಮೂಲ ಉದ್ದೇಶ ಎಂದು ಹೇಳಿಕೊಂಡಿದ್ದನು. ​(ಏಜೆನ್ಸೀಸ್​)