ನ್ಯೂಸ್

ಆ ಪಾತ್ರದಲ್ಲಿ ನಟಿಸಲು ಯಾರೂ ಮುಂದೆ ಬರಲಿಲ್ಲ..ಸಲ್ಮಾನ್​ ಕೇವಲ 1ರೂ. ಪಡೆದು ನಟಿಸಿದ್ದು ಯಾಕೆ ಗೊತ್ತಾ?

ಮುಂಬೈ: ಫಿರ್ ಮಿಲೇಂಗೆ ಚಿತ್ರದಲ್ಲಿ ಸಲ್ಮಾನ್ ಖಾನ್ ಎಚ್‌ಐವಿ ರೋಗಿಯ ಪಾತ್ರದಲ್ಲಿ ನಟಿಸಿದ್ದು, ಈ ಪಾತ್ರಕ್ಕೆ ಜೀವ ತುಂಬಲು ಯಾವುದೇ ನಟ ಸಿದ್ಧರಿರಲಿಲ್ಲ ಎಂದು ನಿರ್ಮಾಪಕ ಶೈಲೇಂದ್ರ ಸಿಂಗ್ ಬಹಿರಂಗಪಡಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್​ ಹಾಕಿರುವ ಶೈಲೇಂದ್ರ ಸಿಂಗ್, 'ಸಲ್ಮಾನ್ ಖಾನ್ ಚಿತ್ರಕ್ಕೆ ಕೇವಲ ಒಂದು ರೂಪಾಯಿ ಶುಲ್ಕವನ್ನು ವಿಧಿಸಿದ್ದರು. ಚಿತ್ರದಲ್ಲಿ, ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ಕ್ಲೈಮ್ಯಾಕ್ಸ್‌ನಲ್ಲಿ ಎಚ್‌ಐವಿ ಸೋಂಕಿಗೆ ಒಳಗಾಗುತ್ತಾರೆ ಮತ್ತು ಸಾಯುತ್ತಾರೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಯಾರೂ ಈ ರೀತಿಯ ಪಾತ್ರ ಮಾಡಲು ಸಿದ್ಧರಿರಲಿಲ್ಲ. ಆಗ ನಾನು ಸಲ್ಮಾನ್ ಖಾನ್ ಗೆ ಕರೆ ಮಾಡಿ ಕೇಳಿಕೊಂಡಿದ್ದೆ. ಅವರು ಒಪ್ಪಿದರು ಎಂದು ವಿವರಿಸಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಲ್ಮಾನ್ ಪಾತ್ರ ಸಾಯುವುದನ್ನು ಅಭಿಮಾನಿಗಳು ಒಪ್ಪುವುದಿಲ್ಲ. ಆದರೆ ಇದು ಇಡೀ ದೇಶಕ್ಕೆ ಸಂದೇಶವನ್ನು ರವಾನಿಸಿದೆ. ಈ ಚಿತ್ರ ಕೇವಲ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿಲ್ಲ, ಟಿವಿಯಲ್ಲಿಯೂ ಸಹ ಪ್ರದರ್ಶನಗೊಂಡಿತು ಎಂದು ಅವರು ವಿವರಿಸಿದ್ದಾರೆ.

ಫಿರ್ ಮಿಲೇಂಗೆ 2004 ರಲ್ಲಿ ಬಿಡುಗಡೆಯಾಗಿದ್ದು, ರೇವತಿ ನಿರ್ದೇಶಿಸಿದ್ದರು. ಸಲ್ಮಾನ್ ಖಾನ್ ಜೊತೆಗೆ ಶಿಲ್ಪಾ ಶೆಟ್ಟಿ ಮತ್ತು ಅಭಿಷೇಕ್ ಬಚ್ಚನ್ ಕೂಡ ನಟಿಸಿದ್ದರು.