ಈ ವಾರದ ಆರಂಭದಲ್ಲಿ 23 ವರ್ಷದ ಯುವಕನೊಬ್ಬ ನಟ ಸಲ್ಮಾನ್ ಖಾನ್ ಅವರ ಮುಂಬೈನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Salman-khan| ನಟ ಸಲ್ಮಾನ್ ಖಾನ್ ಅವರ ಭದ್ರತೆಯ ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ. ಇಷ್ಟೆಲ್ಲದರ ಮಧ್ಯೆ ಇದೀಗ ಅಪರಿಚಿತ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ಮನೆಗೆ ನುಗ್ಗಲು ಯತ್ನಿಸಿರುವುದಾಗಿ ತಿಳಿದು ಬಂದಿದೆ. 2 ದಿನಗಳಲ್ಲಿ 2 ಬಾರಿ ಸಲ್ಮಾನ್ ಖಾನ್ ಮನೆಗೆ ನುಗ್ಗುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಮೇ 19 ಮತ್ತು 20 ರಂದು ಇಬ್ಬರು ವ್ಯಕ್ತಿಗಳು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಪ್ರವೇಶಿಸಿದ್ದಾರೆ. ಮೇ 20 ರಂದು ಸಂಜೆ 7:15 ರ ಸುಮಾರಿಗೆ ಒಬ್ಬ ವ್ಯಕ್ತಿ ಬಾಲಿವುಡ್ ಸೂಪರ್ ಸ್ಟಾರ್ ಅವರ ಮನೆಗೆ ಪ್ರವೇಶಿಸಿದ್ದಾನೆ ಎಂದು ಹೇಳಲಾಗಿದೆ. ಆದಾಗ್ಯೂ, ಶೀಘ್ರದಲ್ಲೇ ಆತನನ್ನು ಬಂಧಿಸಲಾಗಿದ್ದು, ಆತನನ್ನು ಛತ್ತೀಸ್‌ಗಢದ ನಿವಾಸಿ ಜಿತೇಂದ್ರ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಇಂದು (22) ಪೊಲೀಸರು ಘಟನೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಜಿತೇಂದ್ರ ಕುಮಾರ್ಸಿಂಗ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಮೇ 20 ರಂದು ಸಂಜೆ 7:15 ರ ಸುಮಾರಿಗೆ ಮನೆಗೆ ಪ್ರವೇಶಿಸಿದ್ದಾನೆ.
ಇದಕ್ಕೂ ಮುನ್ನ, ಅದೇ ದಿನ ಬೆಳಗಿನ ಜಾವ ಒಬ್ಬ ಮಹಿಳೆ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅವರನ್ನು 32 ವರ್ಷದ ಇಶಾ ಛಾಬ್ರಾ ಎಂದು ಗುರುತಿಸಲಾಗಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಹಿಡಿದಾಗ ಆ ಮಹಿಳೆ ಸಲ್ಮಾನ್ ಖಾನ್ ಅವರ ಕಟ್ಟಡದ ಲಿಫ್ಟ್ ಪ್ರದೇಶದ ಬಳಿ ಇದ್ದಳು ಎಂದು ಹೇಳಲಾಗಿದೆ. ನಂತರ ಆಕೆಯನ್ನು ಬಾಂದ್ರಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
(ಏಜೆನ್ಸೀಸ್)
ಈ ಮೊದಲು ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಆ ಘಟನೆ ನಡೆದ ನಂತರ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಯಿತು. ಇಷ್ಟೆಲ್ಲ ಸೆಕ್ಯುರಿಟಿ ನೀಡಲಾಗಿದ್ದರೂ ಕೂಡ ಅಪರಿಚಿತ ವ್ಯಕ್ತಿಯು ಗ್ಯಾಲಕ್ಸಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದ್ದಾನೆ. ಇದರಿಂದ ಭದ್ರತಾ ಲೋಪ ಆಗಿರುವುದು ಸ್ಪಷ್ಟವಾಗಿದೆ.