ನ್ಯೂಸ್

ಬೋಲ್ಡ್​ ಹುಡುಗಿಯರು ಇತಿಹಾಸ ನಿರ್ಮಿಸುತ್ತಾರೆ; ವಿವಾದದ ನಡುವೆ Salman Khan ಮಾಜಿ ಗೆಳತಿಯ ಪೋಸ್ಟ್​ ವೈರಲ್​

ಮುಂಬೈ: ಮಾಜಿ ಸಚಿವ ಬಾಬಾ ಸಿದ್ದಿಕ್ಕಿರನ್ನು (Baba Siddique) ಹತ್ಯೆ ಮಾಡಿಸುವ ಮೂಲಕ ವಿಶ್ವದಾದ್ಯಂತ ಸಖತ್​ ಸೌಂಡ್​ ಮಾಡುತ್ತಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ (Lawrence Bishnoi) ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನೂ ಆಪರೇಟ್​ ಮಾಡುತ್ತಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಆತನ ಮುಂದಿನ ಟಾರ್ಗೆಟ್​ ಸಲ್ಮಾನ್​ ಖಾನ್​ (Salman Khan) ಎಂದು ನೇರವಾಗಿಯೇ ಹೇಳಿದ್ದು, ಸಲ್ಮಾನ್​ ಖಾನ್​ ಆಪ್ತರಿಗೂ ಅಪಾರ ಕಟ್ಟಿಟ್ಟ ಬುತ್ತಿ ಎಂದು ಖಡಕ್​ ವಾರ್ನಿಂಗ್​ ನೀಡಿದ್ದಾನೆ. ಇದೆಲ್ಲದರ ನಡುವೆಯೇ ಸಲ್ಮಾನ್​ ಖಾನ್​ ಮಾಜಿ ಗೆಳತಿ ಸೋಮಿ ಅಲಿ (Somy Ali) ಲಾರೆನ್ಸ್​ ಬಿಷ್ಣೋಯಿ ನಂಬರ್​ ಕೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ಈಕೆ ಸೌಂಡ್​ ಮಾಡಿದ್ದು, ಈ ಭಾರೀ ಮಾಜಿ ಪ್ರಿಯಕರನನ್ನು ಪರ ವಹಿಸಿಕೊಂಡು ಈಕೆ ಸುದ್ದಿಯಾಗಿದ್ದಾಳೆ.

1991ರಿಂದ 8 ವರ್ಷಗಳ ಕಾಲ ಸಲ್ಮಾನ್​ ಖಾನ್​ (Salman Khan) ಜೊತೆ ಡೇಟಿಂಗ್​ ಮಾಡಿದ್ದ ಸೋಮಿ ಅಲಿ ಆ ಬಳಿಕ ನಟ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ದೂರಾಗಿದ್ದಳು. ಇದಾದ ಬಳಿಕ ಈಕೆ ವಿದೇಶಕ್ಕೆ ತೆರಳಿದ್ದಳು. ಬಾಬಾ ಸಿದ್ದಿಕ್ಕಿ ಹತ್ಯೆ ಬಳಿಕ ಇನ್‌ಸ್ಟಾಗ್ರಾಂ (Instagram) ಮುಖಾಂತರ, ಲಾರೆನ್ಸ್ ಬಿಷ್ಣೋಯ್​ಗೆ (lawrence Bishnoi) ನಂಬರ್​ ಕೊಡುವಂತೆ ಮನವಿ ಮಾಡಿದ್ದು, ಜೈಲಲ್ಲಿದ್ದರೂ ಪರ್ವಾಗಿಲ್ಲ ಜೂಮ್ ಕಾಲ್‌ (Zoom Call) ಮಾಡಿ ಎಂದು ಪೋಸ್ಟ್​ ಮಾಡುವ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ನಾಂಡಿ ಹಾಡಿದ್ದರು. ಇದೀಗ ಪ್ರಿಯಾಂಕಾ ಚೋಪ್ರಾರ (Priyanka Chopra) ಹಳೆಯ ವಿಡಿಯೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ವೈರಲ್​ ಆಗಿರುವ ಪೋಸ್ಟ್​ ನೋಡುವುದಾದರೆ ಹಾಟ್​ ಬೆಡಗಿಯರು ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸುತ್ತಾರೆ. ಹಾಗಾಗಿ ನೀವು ಚಿತ್ರಗಳಲ್ಲಿ ನಟಿಸಬೇಕಾದರೆ ನೀವು ನಿಮ್ಮ ವಿರುದ್ಧವಾದ ಆಯ್ಕೆಗಳನ್ನೇ ಮಾಡಬೇಕು. ನನ್ನ ಪ್ರಕಾರ ಸಬಲೀಕರಣವು ಬರಬಹುದು ಅಥವಾ ಬರದೇನೆ ಇರಬಹುದು ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಎದ್ದಿರುವ ವಿವಾದದ ನಡುವೆ ಈ ವಿಡಿಓವನ್ನು ಯಾಕೆ ಪೋಸ್ಟ್​ ಮಾಡಲಾಗಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.

ಇದಲ್ಲದೆ ಸೋಮಿ ಅಲಿ ಸಲ್ಮಾನ್​ ಖಾನ್​ (Salman Khan) ಪರವಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದು, ಸಲ್ಮಾನ್ ಅವರ ಕುಟುಂಬ ಅಥವಾ ಸ್ನೇಹಿತರು, ಕಾಜೋಲ್, ಟಬು, ಅಜಯ್ ದೇವಗನ್, ರವೀನಾ ಅಥವಾ ಸೈಫ್ ಅವರಿಗೆ ಯಾವುದೇ ಅಪಾಯವಾಗಬಾರದು. ನಮ್ಮಲ್ಲಿ ಕಾನೂನಿದೆ ಹಾಗಾಗಿ ಯಾರ ಹತ್ಯೆಯೂ ಆಗಬಾರದು. ಹೀಗಾಗಿ ನಾನು ನವೆಂಬರ್​ನಲ್ಲಿ ಭಾರತಕ್ಕೆ ಬಂದಾಗ ಲಾರೆನ್ಸ್​ನನ್ನು ಭೇಟಿಯಾಗಲು ಬಯಸುತ್ತೇನೆ ಮತ್ತು ಅವರ ಗುಂಪಿನ ನಾಯಕರಾದ ದೇವೇಂದ್ರರ ಜೊತೆ ಮಾತನಾಡುತ್ತೇನೆ. ಸಲ್ಮಾನ್​ ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದು, ಲಾರೆನ್ಸ್​ ಇವನ ಮೂಲಕ ಪ್ರಚಾರ ಪಡೆಯುತ್ತಿದ್ದಾನೆ ಎಂದು ಸಲ್ಮಾನ್​ ಖಾನ್​ (Salman Khan) ಮಾಜಿ ಗೆಳತಿ ಸೋಮಿ ಅಲಿ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.