ನ್ಯೂಸ್

ಸಲ್ಮಾನ್ ಖಾನ್ ದೊಡ್ಡ ನಟ ಆಗ್ತಾನೆ ಎಂದು ನಾನು ಊಹಿಸಿರಲಿಲ್ಲ; ಪೂನಂ ಧಿಲ್ಲೋನ್ | Salman Khan

Salman Khan | ಬಾಲಿವುಡ್​ನ ಜನಪ್ರಿಯ ನಟಿ ಪೂನಂ ಧಿಲ್ಲೋನ್ ತಮ್ಮ ಸಿನಿ ಜರ್ನಿಯಲ್ಲಿ ಅತ್ಯಂತ ಜನಪ್ರಿಯ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಲೈಲಾ ಸಿನಿಮಾದಲ್ಲಿ ಸುನಿಲ್ ದತ್ ಅವರ ಮಗಳ ಪಾತ್ರದಿಂದ ಹಿಡಿದು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಲೈಲಾ ಚಿತ್ರದಲ್ಲಿ ಪೂನಂ, ಸುನಿಲ್​ ದತ್​ ಮಗಳ ಪಾತ್ರವನ್ನು ಮಾಡುವ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಚಿಕ್ಕವನಾಗಿದ್ದ, ನಾನು ಆತನನ್ನ ಮದುವೆಯಾಗಲು ಬಯಸುತ್ತಿದ್ದೆ ಎಂದು ತಮಾಷೆಯಾಗಿ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ.

ಸಲ್ಮಾನ್​ ಖಾನ್ ಮೊದಲ ಕ್ರಶ್ :

ಸಲ್ಮಾನ್​ ಖಾನ್​ ಸಿನಿಮಾದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಆತ ಚಿಕ್ಕ ಹುಡುಗನಾಗಿದ್ದಾಗ ನಾನು ಅವನನ್ನು ಸಲೀಂ-ಜಾವೇದ್ ಅವರ ಮನೆಯಲ್ಲಿ ನೋಡುತ್ತಿದ್ದೆ. ಸಲ್ಮಾನ್​ ನನಗಿಂತ ಚಿಕ್ಕವನಾಗಿದ್ದ, ಆ ಸಂದರ್ಭದಲ್ಲಿ ಅವನು ತುಂಬಾ ಸುಂದರವಾಗಿದ್ದ ಅವನು ದೊಡ್ಡ ಸ್ಟಾರ್​ ಆಗುತ್ತಾನೆಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನು ಕೆಲಸ ಮಾಡುವಾಗ ಸಲೀಂ-ಜಾವೇದ್ ಅವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ನಂತರ ಮೈನೆ ಪ್ಯಾರ್ ಕಿಯಾ ಚಿತ್ರ ಬಿಡುಗಡೆಯಾದಾಗ ನಾನು ವಿವಾಹವಾದೆ. ಆದರೂ ಸಹ ನಾನು ಸಲ್ಮಾನ್​ ಖಾನ್​ರನ್ನ ಇಷ್ಟ ಪಡುತ್ತಿದ್ದೆ, ನನ್ನ ಪತಿ ಅಶೋಕ್ ಠಾಕೇರಿಯಾ ಅವರನ್ನು ತಮಾಷೆಯಾಗಿ ತಬ್ಬಿಕೊಂಡು ನೋಡಿ ಆತ ಎಷ್ಟು ಮುದ್ದಾಗಿದ್ದಾನೆ ಎಂದು ಹೇಳಿದ್ದೇನೆ. ಕೆಲವು ಕ್ರಷ್​ಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಲ್ಮಾನ್​ ಖಾನ್​ ಮೇಲೆ ಇದ್ದಂತಹ ಪ್ರೀತಿಯ ಬಗ್ಗೆ ನಟಿ ಪೂನಂ ಧಿಲ್ಲೋನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಟಿ ಪೂನಂ ಧಿಲ್ಲೋನ್ ಅವರಿಗೆ ತುಂಬಾ ಆತ್ಮೀಯವಾದ ಸ್ನೇಹ ಬಳಗವಿದೆ. ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದು, ನನಗಿರುವ ಸ್ನೇಹಿತರ ಗುಂಪಿನಲ್ಲಿ ನಟಿ ರೇಖಾ ನನಗೆ ತುಂಬಾ ಹತ್ತಿರವಾದವಳು, ಅವಳ ಮೇಲೆ ನನಗೆ ತುಂಬಾ ಪ್ರೀತಿ ಜಾಸ್ತಿ ಎಂದಿದ್ದಾರೆ.

ಪದ್ಮಿನಿ ಕೊಲ್ಹಾಪುರೆ ಜೊತೆಗಿನ ನಂಟು:

ಪೂನಂ ಧಿಲ್ಲೋನ್ ಅವರು ನಟಿ ಪೂನಂ ಪದ್ಮಿನಿ ಕೊಲ್ಹಾಪುರೆ ಬಗ್ಗೆ ಮಾತನಾಡಿದ್ದು, ನಾವಿಬ್ಬರೂ 'ಸ್ಟ್ರೀಟ್ ಸಿಂಗರ್' ಚಿತ್ರೀಕರಣದ ಸಮಯದಲ್ಲಿ ಮೊದಲು ಭೇಟಿಯಾದೆವು. ನಂತರ ಒಳ್ಳೆಯ ಸ್ನೇಹಿತರಾಗಿ ಚಿತ್ರೀಕರಣದ ಸಂದರ್ಭದಲ್ಲಿ ಬಿಡುವಿನ ವೇಳೆಯಲ್ಲಿ ತಮಾಷೆಯಾಗಿ ಮಾತನಾಡುತ್ತಾ ಸಂತೋಷ ಪಡುತ್ತಿದ್ದೆವು ಎಂದಿದ್ದಾರೆ. ಈ ಚಿತ್ರದಲ್ಲಿ ನಾನು ಮತ್ತು ಪದ್ಮಿನಿ ಇಬ್ಬರೂ ಕೂಡ ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡಿದೆವು. ಅವರು ತುಂಬಾ ಸುಂದರವಾಗಿ ಕಾಣುತ್ತಾರೆಂದು ಎಲ್ಲರೂ ಅವರನ್ನೇ ನೋಡುತ್ತಿದ್ದರು ಎಂದು ಪೂನಂ ಹಳೆ ನೆನಪನ್ನು ಮರುಕಳಿಸಿದ್ದಾರೆ.